ರಾಕಿಂಗ್ ಸ್ಟಾರ್ ಯಶ್ ಅವರ ಸಮಸ್ತ ಅಭಿಮಾನಿ ವೃಂದಕ್ಕೆ ಸಂತಸದ ಸಂಭ್ರಮದ ದಿನ ಬರೋದಕ್ಕೆ ಇನ್ 24 ದಿನ ಬಾಕಿ ಅಷ್ಟೆ.. ಹಿಂಗಿದ್ರು ರಾಕಿಂಗ್ ಸ್ಟಾರ್ ಯಶ್ ಅವರ ನಡೆ ಮುಂದಿನ ಯಾವ ಸಿನಿಮಾ ಕಡಿ ಎಂಬುದೇ ಗೊತ್ತಾಗುತ್ತಿಲ್ಲ.. ಆದ್ರೆ ಈಗೊಂದು ಲೆಕ್ಕಚಾರ ಶುರುವಾಗಿದೆ..
ಜನವರಿ 8ನೇ ತಾರೀಖ್ ರಾಕಿ ಭಾಯ್ ಅವರ 35ನೇ ಜನ್ಮದಿನದ ಪ್ರಯುಕ್ತ ಒಂದು ಬಿಗ್ ಅನೌಸ್ಮೆಂಟ್ ಆಗಲಿದೆ ಅಂತ.. ಹಾಗಾದ್ರೆ ಅದೇನು ಅನೌನ್ಸ್ ಮೆಂಟ್.. ಈ ಬಾರಿ ಯಶ್ ಲೆಕ್ಕಚಾರ ಏನ್ ಇರಬಹುದು? ಬನ್ನಿ ಪತ್ತೆ ಹಚ್ಚೋಣ..
ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಅನ್ನೋ ಕ್ಯೂರಿಯಾಸಿಟಿಗಿಂತ ನೂರು ಪಟ್ಟು ಜಾಸ್ತಿ ಇದೆ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಅನ್ನೋ ವಿಚಾರ.. ಹೊಡೆದ್ರೆ ಆನೆನೇ ಹೋಡಿಬೇಕು , ಒಂದು ಕಲ್ಲಲ್ಲಿ ಎರಡು ಹಕ್ಕಿನ ಉರುಳಿಸ ಬೇಕು ; ಇಂತ ಡಿಫರೆಂಟ್ ಯೋಚ್ನೆಗಳ ಒಡೆಯ ರಾಕಿಂಗ್ ಸ್ಟಾರ್ ಯಶ್..
ಸದಾ ಹತ್ ಹೆಜ್ಜೆ ಮುಂದಿರ್ತಾರೆ ರಾಕಿ ಭಾಯ್.. ಕೆಜಿಎಫ್ ಸಿನಿಮಾಕ್ಕಾಗಿ ದುಡಿದ ಪ್ರತಿಯೊಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಆದ್ರೆ ಯಶ್ ಮಾತ್ರ ಕೆಜಿಎಫ್ ಸಿನಿಮಾ ರಿಲೀಸ್ ದಿನವನ್ನೇ ಕನಸು ಮನಸಿನಲ್ಲೂ ಕನವರಿಸುತ್ತಿದ್ದಾರೆ.. ಒಂದನೇ ಕೆಜಿಎಫ್ ಹೊರ ಬಂದಾಗಿಂದಲ್ಲು ಇಡೀ ಭಾರತೀಯ ಚಿತ್ರರಂಗ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಕೇಳ್ತಾನೆ ಇದೆ.. ಆದ್ರೆ ಯಶ್ ಮಾತ್ರ ಎಲ್ಲಿಗೂ ಗುಟ್ಟು ಬಿಟ್ಟು ಕೊಡ್ತಿಲ್ಲ.. ಆದ್ರೆ ಯಶ್ ಅವರ ಆತ್ಮೀಯ ಮೂಲಗಳು ಹೇಳುತ್ತಿವೆ ಈ ಬಾರಿಯ ಬರ್ತ್ಡೇಗೆ ಯಶ್ ಒಂದು ಧಮಾಕೇಧಾರ್ ಸಮಾಚಾರವನ್ನ ಇಡೀ ತನ್ನ ಪ್ಯಾನ್ ಇಂಡಿಯಾ ಫ್ಯಾನ್ಸ್ಗಳಿಗೆ ನೀಡಲಿದ್ದಾರಂತೆ..
ಜನವರಿ 8 ರಂದು ಯಶ್ ಬಿಗ್ ಅನೌನ್ಸ್ಮೆಂಟ್!
ರಾಕಿ ಭಾಯ್ ಬರ್ತ್ಡೇಗೆ ಸಿಗಲಿರುವ ಗಿಫ್ಟ್ ಏನು?
ಎರಡು ವರ್ಷದ ಹಿಂದೆ ಯಶೋಮಾರ್ಗದ ನೇತಾರ, ಕೆಜಿಎಫ್ ನ ಸರದಾರ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಮಾಗಳಿಂದ ದಾಖಲೆ ಸೃಷ್ಟಿಸಿದಂಗೆ ಬರ್ತ್ಡೇ ವಿಚಾರದಲ್ಲಿಯೂ ದಾಖಲೆ ಸೃಷ್ಟಿಸಿದ್ರು.. ಆದ್ರೆ ಕಳೆದ ಬಾರಿ ಕೊರೊನಾ ಕಾಲದಿಂದ ಬರ್ತ್ಡೇಯನ್ನ ಆಚಾರಿಸಿಕೊಳ್ಳಲಿಲ್ಲ.. ಈ ಬಾರಿ ಏನ್ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ.. ಆದ್ರೆ ಬರ್ತ್ಡೇ ದಿನ ತನ್ನ ಅಭಿಮಾನಿಗಳಿಗೆ ಮಂಡ್ಯ ಬೆಲ್ಲದಂತೆ ಸಮಾಚಾರವನ್ನ ನೀಡಲಿದ್ದಾರೆ ಅನ್ನೊ ಮಾಹಿತಿ ನಮಗೆ ಸಿಕ್ಕಿದೆ..
ಯಶ್ ತಮ್ಮ 35ನೇ ಬರ್ತ್ಡೇ ಪ್ರಯುಕ್ತವಾಗಿ ಜನವರಿ 8ನೇ ತಾರೀಖ್ನಂದು ಒಂದು ಬಿಗ್ ಅನೌನ್ಸ್ಮೆಂಟ್ ಮಾಡಲಿದ್ದಾರೆ.. ಅದು ಹೊಸ ಸಿನಿಮಾದ ಅನೌನ್ಸ್ಮೆಂಟ್ ಎಂದು ನಾವು ನೀವು ಊಹಿಸಬಹುದು.. ಆಗಾಗಾ ಟಾಲಿವುಡ್ ವಲಯದಲ್ಲಿ ಯಶ್ ಅವರ ಹೆಸರು ಬೇರೆ ಬೇರೆ ಡೈರೆಕ್ಟರ್ ಗಳ ಜೊತೆ ತಳುಕು ಹಾಕಿಕೊಳುತ್ತಿತ್ತು.. ಆದ್ರೆ ಮಫ್ತಿ ಖ್ಯಾತಿಯ ನರ್ತನ್ ಹೆಸರು ಮಾತ್ರ ಪರ್ಮ್ನೆಂಟ್ ಆಗಿ ಉಳಿಸಿಕೊಂಡಿದೆ.. ಈ ಪರ್ಮ್ನೆಂಟ್ ಆಗಿ ಉಳಿದಿರುವ ನರ್ತನ್ ಸಿನಿಮಾದಲ್ಲಿ ಯಶ್ ಅನ್ನೋ ವಿಚಾರಕ್ಕೆ ಜನವರಿ 8ನೇ ತಾರೀಖು ಅಧಿಕೃತ ಜೀವ ಹೊಸ ನಿರೀಕ್ಷೆಯ ಭಾವ ಸಿಗೋ ಸಾಧ್ಯತೆ ಇದೆ.. ಜನವರಿ 8ನೇ ತಾರೀಖು ಯಶ್ ತಮ್ಮ ಹೊಸ ಸಿನಿಮಾ ಅನೌನ್ಸ್ಮೆಂಟ್ ಮಾಡುತ್ತಾರೆ ಅನ್ನೋ ಮಾಹಿತಿ ಯಶ್ ಅವರ ಆತ್ಮೀಯ ಬಳಗದಿಂದ ಚಿತ್ರಪ್ರೇಮಿಗಳೇ ತಂಡಕ್ಕೆ ಸಿಕ್ಕಿದೆ..
Discussion about this post