: ನಟಿ ರಚಿತಾ ರಾಮ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಮಾಹಿತಿ ಲಭ್ಯವಾಗಿದೆ. ಸದ್ಯ ಅವರು ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟಕ್ಕೂ ಆಗಿದ್ದು ಏನೆಂದ್ರೆ, ರಚಿತಾ ರಾಮ್ ಅವರು ನಟಿಸಿರುವ ಏಕ್ ಲವ್ ಯಾ ಹಾಗೂ ಲವ್ ಯೂ ರಚ್ಚು ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಸತತವಾಗಿ ಪ್ರಯಾಣದಲ್ಲಿದ್ದ ಕಾರಣ ಅವರಿಗೆ ಮೈ-ಕೈ ನೋವು ಹಾಗೂ ಜ್ವರ ಕಾಣಿಸಿಕೊಂಡಿತ್ತಂತೆ. ಈ ಹಿನ್ನೆಲೆಯಲ್ಲಿ ನಿನ್ನೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ರಚಿತಾ ಅವರು ಚಿಕಿತ್ಸೆ ಪಡೆದುಕೊಂಡು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಚಿತಾ ರಾಮ್ ನಟನೆಯ ಏಕ್ ಲವ್ ಸಿನಿಮಾ 2022ರ ಜನವರಿ 21ಕ್ಕೆ ಬಿಡುಗಡೆಯಾಗಲಿದ್ದು, ಲವ್ ಯೂ ರಚ್ಚು ಸಿನಿಮಾ ಡಿಸೆಂಬರ್ 31 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಲವ್ ಯೂ ರಚ್ಚು ಚಿತ್ರತಂಡ ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿತ್ತು.
Discussion about this post