ನಟ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದ ಗಂಧದ ಗುಡಿಯ ಬಿಡುಗಡೆಗೆ ಯೋಜಿಸಲಾಗುತ್ತಿದೆ. ಈ ಕುರಿತು ಆಪ್ತಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ನಟ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದ ರಾಜ್ಯದ ವನ್ಯಸಂಪತ್ತಿನ ಕುರಿತಾದ ಚಿತ್ರವೊಂದನ್ನು ನವೆಂಬರ್ 1ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು.
ಆ ಚಿತ್ರಕ್ಕಾಗಿ ಲಾಕ್ಡೌನ್ ವೇಳೆ 2 ತಿಂಗಳು ಪುನೀತ್ ಕಾಡು ಸುತ್ತಿದ್ದರು. ಆ ಸಮಯದಲ್ಲಿ ಕಾಡಿನಲ್ಲಿ ಕಳೆದ ಕ್ಷಣಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಅದನ್ನು ನವೆಂಬರ್ 1 ರಂದು ಬಿಡುಗಡೆ ಮಾಡಲು ತೀರ್ಮಾನಿಸಿ, ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿತ್ತು. ನಮ್ಮ ನಾಡಿನ ಕಾಡುಗಳು, ವನ್ಯಜೀವಿ ಸಂಪತ್ತನ್ನು ಕುರಿತ ಚಿತ್ರ ಅದಾಗಿದ್ದು, ‘ಗಂಧದ ಗುಡಿ’ ಎಂದು ಹೆಸರಿಡಲು ಉದ್ದೇಶಿಸಲಾಗಿತ್ತು. 90 ನಿಮಿಷಗಳ ಆ ಚಿತ್ರವನ್ನು ರಾಜ್ಯೋತ್ಸವದ ದಿನ ಬಿಡುಗಡೆ ಮಾಡುವ ಕನಸನ್ನು ಪುನೀತ್ ಕಂಡಿದ್ದರು. ಆದರೆ ಆ ಕನಸು ನನಸಾಗುವ ಮುನ್ನವೇ ಪುನೀತ್ ನಿಧನ ಹೊಂದಿದ್ದರು. ಇದೀಗ ಪುನೀತ್ ರಾಜಕುಮಾರ್ ಆಪ್ತವಲಯದಿಂದ ಬಂದಿರುವ ಮಾಹಿತಿಯ ಪ್ರಕಾರ, ಅಪ್ಪು ಅವರ 11 ದಿನದ ಕಾರ್ಯ ಮುಗಿದ ನಂತರ ರಿಲೀಸ್ಗೆ ಚಿಂತನೆ ನಡೆಸಲಾಗಿದೆ. ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಚರ್ಚಿಸಿ, ಬಳಿಕ ಬಿಡುಗಡೆ ಕುರಿತು ಯೋಜಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
Discussion about this post