ಬೆಂಗಳೂರು: ಬಹುಚರ್ಚಿತ ಮತಾಂತರ ನಿಷೇಧ ಮಸೂದೆ ಮಂಡನೆಯಾಗಿದೆ. ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗ್ತಿದ್ದಂತೆ ಸರ್ಕಾರ ವಿಪಕ್ಷ ನಾಯಕರ ನಡುವೆ ಮತಾಂತರ ಸಮರವೇ ನಡೀತು. ಆಡಳಿತ-ವಿಪಕ್ಷ ನಾಯಕರ ನಡುವಿನ ಮಾತಿನ ಯುದ್ಧಕ್ಕೆ ವಿಧಾನಸಭೆ ಸಾಕ್ಷಿಯಾಯ್ತು. ಅಷ್ಟಕ್ಕೂ ವಿಪಕ್ಷ ಹಾಗೂ ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾದ ಮತಾಂತರ ನಿಷೇಧ ಮಸೂದೆಯಲ್ಲೇನಿದೆ..?
ಕಾನೂನು ಉಲ್ಲಂಘಿಸಿದ್ರೆ ಶಿಕ್ಷೆ ಏನು ಅನ್ನೋದರ ವಿವರ ಇಲ್ಲಿದೆ.
ಮತಾಂತರ ನಿಷೇಧ ಮಸೂದೆ ಹೈಲೈಟ್ಸ್
- ಆಮಿಷ ಒಡ್ಡಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ನಿಷೇಧ
- ಎಸ್ಸಿ, ಎಸ್ಟಿ ಸಮುದಾಯದವರನ್ನು ಯಾವುದೇ ಕಾರಣಕ್ಕೂ ಮತಾಂತರ ಮಾಡುವಂತಿಲ್ಲ
- ಮತಾಂತರಗೊಳ್ಳುವ ವ್ಯಕ್ತಿ ಜಿಲ್ಲಾಧಿಕಾರಿಗೆ 30 ದಿನಗಳ ಮುಂಚೆಯೇ ಅರ್ಜಿ ಸಲ್ಲಿಸಬೇಕು
- ವಿಚಾರಣೆ ವೇಳೆ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮಕೈಗೊಳ್ಳಬಹುದು
- ಮತಾಂತರಕ್ಕಾಗಿಯೇ ಆದ ಮದುವೆ ಕಾನೂನು ಬಾಹಿರ ಎಂದು ಘೋಷಣೆ
- ಬಲವಂತದ ಮತಾಂತರವು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗುವುದು
- ಅನ್ಯ ಧರ್ಮದ ಮದುವೆಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ
- ಮೂವತ್ತು ದಿನಗಳ ಒಳಗೆ ಯಾವುದಾದರೂ ಆಕ್ಷೇಪಣೆಗಳು ಬಂದರೆ ವಿಚಾರಣೆ ನಡೆಸತಕ್ಕದ್ದು
- ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ಮತಾಂತರ ಮಾಡುವಂತಿಲ್ಲ
- ಮತಾಂತರದ ಉದ್ದೇಶದಿಂದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಬಹುದು
- ವ್ಯಕ್ತಿಯು ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಮತಾಂತರವೆಂದು ಪರಿಗಣಿಸಲ್ಲ
- ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ
- ಅಪರಾಧಕ್ಕೆ ನೆರವು ನೀಡಿದ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವಿದೆ
ಬಲವಂತದ ಮತಾಂತರಕ್ಕೆ ಶಿಕ್ಷೆ ಏನು?
- ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ
- ಅಪ್ರಾಪ್ತ ವ್ಯಕ್ತಿ, ಮಹಿಳೆ, ಎಸ್‌ಸಿ-ಎಸ್‌ಟಿ ವ್ಯಕ್ತಿಯ ಬಲವಂತದ ಮತಾಂತರ ಅಪರಾಧ
- ಈ ಕಾಯ್ದೆಯ ಪ್ರಕಾರ 3 ರಿಂದ 10 ವರ್ಷಗಳ ವರೆಗೆ ಜೈಲು, 50 ಸಾವಿರ ರೂ. ದಂಡ
- ಮತಾಂತರಕ್ಕೆ ಒಳಗಾದವರಿಗೆ ಆಪಾದಿತನಿಂದ ಗರಿಷ್ಠ 5 ಲಕ್ಷ ರೂಪಾಯಿ ಪರಿಹಾರ
- ಅಪರಾಧ ಪುನರಾವರ್ತನೆ ಆದಲ್ಲಿ 5 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ ವಸೂಲಿ
- ಮತಾಂತರ ಉದ್ದೇಶದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ಅವಕಾಶ
- ವಿಚಾರಣೆ ವೇಳೆ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅವಕಾಶ
- ಅಪರಾಧಕ್ಕೆ ನೆರವು, ದುಷ್ಪ್ರೇರಣೆ ನೀಡಿದವರನ್ನೂ ಆರೋಪಿಯನ್ನಾಗಿ ಪರಿಗಣನೆ
ಒಟ್ನಲ್ಲಿ ಮಸೂದೆಯಲ್ಲಿರೋ ಅಂಶಗಳಿಗೆ ವಿಪಕ್ಷವಂತೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾದ್ರೂ ಸರ್ಕಾರ ಮಾತ್ರ ಮಸೂದೆಯನ್ನ ಸಮರ್ಥಿಸಿಕೊಳ್ತಿದೆ.
Discussion about this post