ಕೊರೊನಾ ಒಮಿಕ್ರಾನ್ ಹಿನ್ನೆಲೆ ನಿನ್ನೆಯಿಂದ ರಾಜ್ಯಾದ್ಯಂತ ನೈಟ್ಕರ್ಫ್ಯೂ ಜಾರಿ ಮಾಡಲಾಗಿದೆ. ಮೊದಲ ದಿನ ನೈಟ್ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನದ ನೈಟ್ ಕರ್ಫ್ಯೂ ಹೇಗಿತ್ತು? ಏನೆಲ್ಲಾ ಆಯ್ತು..? ಇಲ್ಲಿದೆ ನೈಟ್ಕರ್ಫ್ಯೂದ ಮೊದಲ ದಿನದ ಡೀಟೈಲ್ ರಿಪೋರ್ಟ್..
ಎಲ್ಲೆಲ್ಲೂ ಪೊಲೀಸ್ ಬ್ಯಾರಿಕೆಡ್.. ರಸ್ತೆಯಲ್ಲಿ ಪೊಲೀಸ್ ಸರ್ಪಗಾವಲು.. 10 ಗಂಟೆಯಾಗ್ತಿದ್ದಂತೆ ಅಂಗಡಿ ಮುಚ್ಚಿಸುತ್ತಿರೋ ಪೊಲೀಸರು.. ಮೈಕ್ ಮೂಲಕ ನೈಟ್ಕರ್ಫ್ಯೂ ಬಗ್ಗೆ ಮಾಹಿತಿ.. ಕುದುರೆ ಮೇಲೇರಿ ಬಿಗಿ ನಿಯಮ ಕಟ್ಟುನಿಟ್ಟಿನ ಜಾರಿಯ ಪರಿಶೀಲನೆ.. ಕರ್ಫ್ಯೂ ಇದ್ರೂ ಓಡಾಡ್ತಿರೋ ಜನರು.. ವಾಹನಗಳನ್ನ ತಡೆದು ಬುದ್ದಿ ಹೇಳಿ ಕಳುಹಿಸ್ತಿರೋ ಪೊಲೀಸರು… ಕಿರಿಕ್ ಮಾಡಿದವರಿಗೆ ದಂಡ.. ವಾಹನ ಸೀಜ್ ಬಿಸಿ.. ಇದು ನೈಟ್ಕರ್ಫ್ಯೂನ ಮೊದಲ ದಿನ ರಾಜ್ಯಾದ್ಯಂತ ಕಂಡುಬಂದ ದೃಷ್ಯಗಳು…
ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ 9 ಗಂಟೆ ಆಗ್ತಿದ್ದಂತೆ ಸಿಲಿಕಾನ್ ಸಿಟಿಯ ಗಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರು ಮೈಕ್ ಮೂಲಕ ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಅನೌನ್ಸ್ ಮಾಡಿದ್ರು. ಪೊಲೀಸರ ಮಾತು ಕೇಳಿ ಅಂಗಡಿ ಮುಂಗಟ್ಟು ಮುಚ್ಚಿದ್ರೆ ಅತ್ತ ಆಟೋ, ಬೈಕ್, ಟ್ಯಾಕ್ಸಿ ಸೇರಿ ವಾಹನ ಸಂಚಾರ ನಿಲ್ಲೋದಕ್ಕೆ ರಾತ್ರಿ 1 ಗಂಟೆ ವರೆಗೂ ಟೈಂ ಬೇಕಾಯ್ತು.. ಅಷ್ಟಾದ್ರೂ ಕೂಡ ಕೆಲ ವಾಹನಗಳು ಓಡಾಡುತ್ತಲೇ ಇದ್ವು.. ಬ್ಯಾರಿಕೇಡ್ ಹಾಕಿ ಜನ ಹಾಗೂ ವಾಹನ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಹರಸಾಹಸಪಟ್ಟರು.
ಇನ್ನು ಬ್ರಿಗೇಡ್ ರಸ್ತೆಯ ಪಬ್ ಒಂದರಿಂದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಗೆಳೆಯರ ಜೊತೆಗೆ ಹೊರಬರ್ತಿದ್ರು.. ನೈಟ್ ಕರ್ಫ್ಯೂ ಶುರುವಾಗ್ತಿದ್ದಂತೆಯೇ ಆಗ್ತಿದ್ದಂತೆ ಬ್ರಿಗೇಡ್ ರಸ್ತೆಯಲ್ಲಿ ಮಾಧ್ಯಮಗಳು ಫಿಲ್ಡಿಗಿಳಿದು ಗ್ರೌಂಡ್ ರಿಪೋರ್ಟ್ ಗೆ ನಿಂತಿದ್ವು… ಈ ವೇಳೆ ಮಾಧ್ಯಮದವರ ಮೇಲೆ ದಿವ್ಯಾ ಸುರೇಶ್ ಅಂಡ್ ಟೀಂ ಮುಗಿಬಿದ್ದ ಪ್ರಸಂಗ ನಡೀತು. ದಿವ್ಯಾ ಸ್ನೇಹಿತನೊಬ್ಬ ಕ್ಯಾಮೆರ ಕಿತ್ತುಕೊಳ್ಳಲು ಯತ್ನಿಸಿದ.. ಇಷ್ಟೆಲ್ಲಾ ರಾದ್ಧಾಂತ ಆಗ್ತಿದ್ದಂತೆ ದಿವ್ಯಾ ಸುರೇಶ್ ಆಟೋ ಹಿಡಿದು ಮನೆಯತ್ತ ಹೊರಟು ಹೋದರು.
Discussion about this post