ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಬೆನ್ನಲ್ಲೇ ತನ್ನ ಮೇಲೆ ಕೇಳಿ ಬಂದ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸ್ಪಷ್ಟನೆ ನೀಡಿದರು. ಈ ಸಂಬಂಧ ಮಾತಾಡಿದ ಗೋಪಾಲಕೃಷ್ಣಾ, ನನ್ನ ತುಳೀಬೇಕು ಎಂದು ಎಸ್.ಆರ್ ವಿಶ್ವನಾಥ್ ಹೀಗೆ ವಿಡಿಯೋ ಎಡಿಟ್ ಮಾಡಿದ್ದಾರೆ.
ನಾನು ಮಾತಾಡಿದ್ದು ನಿಜ, ಆದರೆ ವಿಡಿಯೋದಲ್ಲಿ ಇರೋದೆಲ್ಲಾ ನಿಜವಲ್ಲ. ನಾನೇ ಕಾಂಗ್ರೆಸ್ನಿಂದ ಗೋಪಾಲಕೃಷ್ಣಾಗೆ ಟಿಕೆಟ್ ಕೊಡಿಸಿದ್ದೇನೆ ಎಂದು ಎಸ್.ಆರ್ ವಿಶ್ವನಾಥ್ ಸುಳ್ಳು ಹೇಳಿ ಗೆದ್ದರು ಎಂದರು.
ನಾನು ಆಫೀಸ್ನಲ್ಲಿದ್ದೆ, ಯಾವುದೇ ಭೂವಿವಾದ ಸಂಬಂಧ ಕುಳ್ಳ ದೇವರಾಜ್ ನಾನು ಮಾತಾಡಿದ್ದು ನಿಜ. ಆದರೆ, ವಿಡಿಯೋದಲ್ಲಿ ಇರೋದೆಲ್ಲಾ ರಾಜಕೀಯ ದ್ವೇಷದಿಂದ ಮಾಡಿರೋದು. ನಾನು ಮಾತಾಡಿರೋ ವಿಡಿಯೋವನ್ನು 3 ಗಂಟೆಯಲ್ಲ, 7 ಗಂಟೆ ಎಡಿಟ್ ಮಾಡಬಹುದು ಎಂದರು.
ಯಾವುದೋ ಲ್ಯಾಂಡ್ ಸೆಟಲ್ಮೆಂಟ್ ವಿಚಾರದಲ್ಲಿ ನಾನು ಕುಳ್ಳ ದೇವರಾಜನನ್ನು ಮಾತಾಡಿಸಿದ್ದೆ. ಯಾವ ಕಾರಣಕ್ಕಾಗಿ ಹೀಗೆ ಎಸ್.ಆರ್ ವಿಶ್ವನಾಥ್ ಮಾಡಿದರೋ ಗೊತ್ತಿಲ್ಲ. ಲ್ಯಾಂಡ್ ವಿಚಾರ ಸಂಬಂಧ ನಾನು ಕೋರ್ಟ್ಗೆ ಹೋಗಿದ್ದು ನಿಜ. ಒಮ್ಮೆ ಬಿಬಿಎಂಪಿ ಕಮೀಷನರ್ ನಾನು ಕಟ್ಟಿಸುತ್ತಿದ್ದ ಬಿಲ್ಡಿಂಗ್ಗೆ ಸ್ಟೇ ತಂದಿದ್ದರು. ಆಗ ಕೋರ್ಟ್ಗೆ ಹೋಗಿ ಗೆದ್ದು ಬಂದಿದ್ದೇನೆ ಎಂದು ಹೇಳಿದರು.
Discussion about this post