ಮೈಸೂರು: ವಿಧಾನಪರಿಷತ್ ಚುನಾವಣೆ (ಎಂಎಲ್ಸಿ)ಯಲ್ಲಿ ತಮಗೆ ಜೆಡಿಎಸ್ ಟಿಕೆಟ್ ನೀಡದೆ ಇರೋದಕ್ಕೆ ‘ಮೈಸೂರು ಮಹಾರಾಜ’ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್ ಅವರು, ಜೆಡಿಎಸ್ ಅವರೇ ನನ್ನ ಮನೆ ಬಾಗಿಲಿಗೆ ಬಂದು ಬಿ-ಫಾರ್ಮ್ ಕೊಟ್ಟು ಹೋಗಿದ್ರು.
ಬಳಿಕ ಅಪ್ಪ ಮಗ ಕಿತ್ತಾಡಿಕೊಂಡು ನನಗೆ ಅವಮಾನ ಮಾಡಿದ್ರು. ಆದರೆ ಕೊನೆಗೆ ಮೈಸೂರು ಮಹಾರಾಜರ ಮಾತಿನಿಂದ ಕೇಳಿ ನನಗೆ ಟಿಕೆಟ್ ಕೊಟ್ಟಿಲ್ಲ. ಮೈಸೂರು ಮಹರಾಜ ಅಂದ್ರೆ ಚಾಮರಾಜ ಒಡೆಯರ್ ಅಲ್ಲ. ನಮ್ಮಂತವರಲ್ಲೇ ಒಬ್ಬರು ಮಹಾರಾಜರಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಮಂತ್ರಿ, ಸೇನಾಧಿಪತಿ ಎಲ್ಲಾ ಅವರೇ. ಅವರೊಬ್ಬರೇ ಪಕ್ಷದಲ್ಲೇ ಉಳಿದುಕೊಳ್ಳುವುದು ಎಂದು ಶಾಸಕ ಸಾ.ರಾ.ಮಹೇಶ್ ಹೆಸರೇಳದೆ ವ್ಯಂಗ್ಯ ಮಾಡಿದ್ದಾರೆ.
ಚುನಾವಣೆಯಲ್ಲಿ ನಾನು ಕಾಂಗ್ರೆಸ್, ಬಿಜೆಪಿಯನ್ನೇ ಬೆಂಬಲಿಸಿರೋದು. ಮೈಸೂರಿನಲ್ಲಿ ಎರಡು ಸ್ಥಾನಗಳಿವೆ, ಕಾಂಗ್ರೆಸ್-ಬಿಜೆಪಿಗೆ ಬೆಂಬಲಿಸಿದ್ದೇನೆ. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಜ.5 ರಂದು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಲ್ಲವನ್ನ ಸುದ್ದಿಗೋಷ್ಠಿ ನಡೆಸಿ ಹೇಳ್ತೀನಿ. ನನಗೆ ಬಿ ಫಾರ್ಮ್ ಕೊಟ್ಟಿದ್ದು ತೋರುಸುತ್ತೀನಿ. ನಾನು ಇದುವರೆಗೂ ಮೈಲ್ಡ್ ರಾಜಕಾರಣ ಮಾಡ್ತಿದ್ದೆ. ಇನ್ಮುಂದೆ ನೂರಕ್ಕೆ ನೂರು ರಫ್ ರಾಜಕಾರಣ ಮಾಡ್ತೀನಿ. ಯಾರು..? ಯಾರಿಂದಲೂ ಯಾರನ್ನು..? ಮುಗಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Discussion about this post