ಹೊಸದಿಲ್ಲಿ : ದೇಶದಲ್ಲಿ ನೋಟು ಅಮಾನ್ಯೀಕರಣಗೊಂಡು ನವೆಂಬರ್ 8 ರಂದು 5 ವರ್ಷಗಳು ಪೂರ್ಣಗೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಅದನ್ನು ‘ವಿಪತ್ತು’ ಎಂದು ಕರೆದು ಪ್ರಧಾನಿ ಮೋದಿ ಅವರಿಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ
”ನೋಟು ಅಮಾನ್ಯೀಕರಣ ಯಶಸ್ವಿಯಾದರೆ, 1.ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ?
2.ಕಪ್ಪು ಹಣ ಏಕೆ ವಾಪಸ್ ಬಂದಿಲ್ಲ?
3.ಆರ್ಥಿಕತೆ ಏಕೆ ನಗದು ರಹಿತವಾಗಿ ಹೋಗಿಲ್ಲ?
4.ಭಯೋತ್ಪಾದನೆಗೆ ಏಕೆ ಹೊಡೆತ ಬಿದ್ದಿಲ್ಲ?
5.ಬೆಲೆ ಏರಿಕೆಯನ್ನು ಏಕೆ ನಿಯಂತ್ರಿಸಿಲ್ಲ?” ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಐದು ವರ್ಷಗಳ ಹಿಂದೆ ನವೆಂಬರ್ 8 ರ ರಾತ್ರಿ.
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ 500 ಮತ್ತು 1,000 ರೂ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದ್ದರು, ಭಾರತದ 86% ಕರೆನ್ಸಿಯನ್ನು ಅಮಾನ್ಯಗೊಳಿಸಲಾಗಿತ್ತು.
Discussion about this post