ಗೋವಾ: ಭಾರತದ ಭೂಪಟದ ಪ್ರವಾಸಿ ತಾಣಗಳ ಲಿಸ್ಟ್ನಲ್ಲಿ ಗೋವಾಗೆ ಮೊದಲ ಸ್ಥಾನ. ಮೋಜು ಮಸ್ತಿ ಮಾಡಿ ರೀಲ್ಯಾಕ್ಸ್ ಆಗಲು ಗೋವಾ ಹೇಳಿ ಮಾಡಿಸಿದ ಜಾಗ. ಇಲ್ಲಿ ಎಲ್ಲವೂ ಇದೆ ಇದೀಗ ಭಾರತದಲ್ಲಿಯೇ ಮೊದಲ ಎನ್ನಲಾದ ಮೊಟ್ಟಮೊದಲ ಆಲ್ಕೋಹಾಲ್ ಮ್ಯೂಸಿಯಂ ಗೋವಾದಲ್ಲಿ ಆರಂಭವಾಗಿದೆ.
ಸ್ಥಳೀಯ ಉದ್ಯಮಿ ನಂದನ್ ಕುಡ್ಚಡ್ಕರ್ ಈ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ಈ ವಸ್ತು ಸಂಗ್ರಹಾಲಯಕ್ಕೆ ಆಲ್ ಆಲ್ಕೋಹಾಲ್ ಎಂದು ಹೆಸರಿಡಲಾಗಿದೆ. ಶತಮಾನಗಳ ಹಿಂದೆ ಮದ್ಯ ಸಂಗ್ರಹಿಸುತ್ತಿದ್ದ ಸಾಂಪ್ರದಾಯಿಕ ಗಾಜಿನ ವ್ಯಾಟ್ ಸೇರಿ ನೂರಾರು ಕಲಾಕೃತಿಗಳನ್ನ ಇಲ್ಲಿ ಸಂಗ್ರಹಿಸಲಾಗಿದೆ.
ಗೋವಾದ ಶ್ರೀಮಂತ ಪರಂಪರೆ ಹಾಗೂ ಫೆನಿ ಎಂಬ ಸ್ಥಳೀಯ ಮದ್ಯದ ಬಗ್ಗೆ ತಿಳಿಸಲು ಈ ಮ್ಯೂಸಿಯಂ ಸ್ಥಾಪಿಸಲಾಗಿದೆ ಅಂತ ನಂದನ್ ಕುಡ್ಚಡ್ಕರ್ ಹೇಳಿಕೊಂಡಿದ್ದಾರೆ. ಶತಮಾನಗಳ ಹಿಂದೆ ತಯಾರಿಸಿದ ಸ್ಥಳೀಯ ಪೆನ್ನಿ ಕೂಡ ಈ ಮ್ಯೂಸಿಯಂನ ವಿಶೇಷತೆಗಳಲ್ಲೊಂದಾಗಿದೆ. ಭಾರತದ ಸ್ಥಳೀಯ ಮದ್ಯಗಳು ಸೇರಿದಂತೆ ವಿಶ್ವದೆಲ್ಲೆಡೆ ಸಿಗುವ ಮದ್ಯಗಳನ್ನು ಸಂಗ್ರಹಿಸಿ ಮ್ಯೂಸಿಯಂನಲ್ಲಿ ಇಡಲಾಗಿದೆ ಎಂದು ಕುಡ್ಚಡ್ಕರ್ ಹೇಳಿದ್ದಾರೆ.
ಇದನ್ನೂ ಓದಿ :
Discussion about this post