ರಾಮನಗರ: ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕುಯ್ಯುವುದು ಕಾಂಗ್ರೆಸ್ ಕೆಲಸ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ದೇವೇಗೌಡರು ಪ್ರಧಾನಿ ಆಗಿದ್ದು, ಕಾಂಗ್ರೆಸ್ ನಿಂದ ಅಂತಾ ಹೇಳ್ತಾರೆ. ಅವರೇನು ಕಾಂಗ್ರೆಸ್ ಪಕ್ಷದಿಂದ ಅರ್ಜಿ ಹಿಡಿದು ಹೋಗಿದ್ರಾ ಪ್ರಧಾನಿ ಆಗ್ಲಿಕ್ಕೆ?
ನಾನು ಮುಖ್ಯಮಂತ್ರಿ ಆಗಿದ್ದೇ ಆಗ್ಲೇನಾದ್ರೂ ನಾನು ಅರ್ಜಿ ಹಿಡಿದುಕೊಂಡು ಇವರ ಬಳಿ ಬಂದಿದ್ನಾ? ನಮಗೆ ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕುಯ್ಯುವುದೇ ಇವರ ಕೆಲಸ. ಇದು ನಮಗೆ ಎರಡೂ ಮೂರು ಬಾರಿ ಅನುಭವವಾಗಿದೆ. ಹೀಗಾಗಿ ಸ್ಥಳೀಯವಾಗಿ ಸ್ವಾತಂತ್ರ್ಯ ಪಕ್ಷ ತರಲು ಹೊರಟ್ಟಿದ್ದೇವೆ. 2023ಕ್ಕೆ ನಾವು ಏನು ಎಂಬುದನ್ನ ತೋರಿಸುತ್ತೇವೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಬಿಎಸ್‌ವೈ ಎಂಎಲ್‌ಸಿ ಚುನಾವಣೆಗೆ ನಮ್ಮ ಅಭ್ಯರ್ಥಿಗಳ ಬೆಂಬಲ ನೀಡಿ ಎಂದು ವೈಯಕ್ತಿಕ ಮನವಿ ಮಾಡಿದ್ದು, ಅದು ಅವರ ದೊಡ್ಡತನ. ಬಳಿಕ ನನ್ನ ನಿರ್ಧಾರಕ್ಕೆ ಬಿಎಸ್‌ವೈ ಅಭಿನಂದಿಸಿ ಸ್ವಾಗತ ಕೋರಿದ್ರು. ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುವ ಸೌಜನ್ಯವೂ ಇಲ್ಲ. ಅವರ ನಡವಳಿಕೆಗಳನ್ನ ನೋಡಿದ್ರೆ ಸಹಾಯ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಮನೋಭಾವ ಇಲ್ಲ ಎನ್ನಿಸುತ್ತದೆ ಎಂದು ಮಾಜಿ ಸಿಎಂ ಟೀಕೆ ಮಾಡಿದ್ದಾರೆ.
Discussion about this post