ಹುಟ್ಟಿದ ಮೇಲೆ ಸಾವು ನಿಶ್ಚಿತ. ಆದ್ರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಚಲನಚಿತ್ರರಂಗದ ಅನೇಕರು ಇಹಲೋಕ ತ್ಯಜಿಸಿದ್ದಾರೆ. ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಪ್ರಸಿದ್ಧ ಧಾರಾವಾಹಿ ನಟಿ ಉಮಾ ಮಹೇಶ್ವರಿ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಟಿ ಉಮಾ ಮಹೇಶ್ವರಿ ನಿಧನದ ಬಗ್ಗೆ ಶಾಂತಿ ವಿಲಿಯಮ್ಸ್ ಮಾಹಿತಿ ನೀಡಿದ್ದಾರೆ. ನೋವು ತೋಡಿಕೊಂಡ ಅವರು, ಇದು ನಂಬಲಾಗದ ಘಟನೆ ಎಂದಿದ್ದಾರೆ. ಉಮಾ ಮಹೇಶ್ವರಿ, ಚೆನ್ನೈನಲ್ಲಿ ಭಾನುವಾರ ನಿಧನರಾಗಿದ್ದಾರೆ. ಸಾವಿಗೆ ಮೊದಲು ನೆಲದ ಮೇಲೆ ಉಮಾ ಕುಸಿದು ಬಿದ್ದಿದ್ದರು ಎನ್ನಲಾಗಿದೆ
ಉಮಾ ನನಗೆ ಮಗಳಿದ್ದಂತೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇವರು ಏಕೆ ಕರೆದೊಯ್ಯುತ್ತಿದ್ದಾನೆಂಬುದು ನನಗೆ ಗೊತ್ತಾಗ್ತಿಲ್ಲ ಎಂದಿದ್ದಾರೆ. ಉಮಾ ಮಹೇಶ್ವರಿ ಕೆಲ ತಿಂಗಳಿಂದ ಕಾಮಾಲೆ ರೋಗದಿಂದ ಬಳಲುತ್ತಿದ್ದರಂತೆ. ಅದಕ್ಕೆ ಚಿಕಿತ್ಸೆ ನಡೆಯುತ್ತಿತ್ತಂತೆ. ಉಮಾ ಪತಿ, ಪಶು ವೈದ್ಯರಾಗಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಶಾಂತಿ ವಿಲಿಯಮ್ಸ್ ಪೋಸ್ಟ್ ಮಾಡಿದ್ದಾರೆ. ಉಮಾ ಮಹೇಶ್ವರಿ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ :
Discussion about this post