ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಮೌನವಹಿಸಿರುವ ಸಿಎಂ ಉದ್ಧವ್ ಠಾಕ್ರೆ ಈಗ ತನ್ನ ರಾಜ್ಯದ ಜನರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಎಂಇಎಸ್ ಪುಂಡಾಟಿಕೆ ಬಗ್ಗೆ ತುಟಿಬಿಚ್ಚದ ಇವರು, ಮರಾಠಿಗರ ಮೇಲೆ ಕರ್ನಾಟಕದಲ್ಲಿ ದಾಳಿ ನಡೆಯುತ್ತಿದೆ.
ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿ ನ್ಯಾಯ ಒದಗಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
तसेच कर्नाटकातील मराठी जनतेवरील कानडी अत्याचार थांबवून या हिणकस, विकृत मनोवृत्तीचा बीमोड करण्यासाठी पंतप्रधानांनी स्वतः लक्ष घालून तेथील राज्य शासनाला त्वरित संबंधितांवर कडक कारवाई करण्यास सांगावे, अशा तीव्र शब्दांत मुख्यमंत्र्यांनी भावना व्यक्त केल्या.
— CMO Maharashtra (@CMOMaharashtra) December 18, 2021
ರಾಜ್ಯದ ಜನರ ಮೇಲೆ ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ದಾಳಿ ನಡೆಸುತ್ತಿದ್ದಾರೆ. ಕರ್ನಾಟಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಕೊಲ್ಲಾಪುರದಲ್ಲಿ ನಾಡಿನ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಲಾಗಿದೆ. ಕರ್ನಾಟಕ ಭಾವುಟಕ್ಕೆ ಬೆಂಕಿ ಹಚ್ಚಲಾಗಿದೆ. ಹೀಗಿದ್ದರೂ ತನ್ನ ರಾಜ್ಯದ ಜನರಿಗೆ ಬುದ್ಧಿವಾದ ಹೇಳಿ ಶಾಂತಿ ಸ್ಥಾಪಿಸಬೇಕಿದ್ದ ಉದ್ಧವ್ ಠಾಕ್ರೆ ಈಗ ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ.
Discussion about this post