ಭೋಪಾಲ್: ಮಹಾತ್ಮ ಗಾಂಧಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶದ ಸ್ವಾಮೀಜಿ ಕಾಳಿಚರಣ ಮಹಾರಾಜರನ್ನು ಇಂದು ಛತ್ತೀಸ್ಗಢ ಪೊಲೀಸರು ಬಂಧಿಸಿದ್ದು, ದೇಶದ್ರೋಹ ದಾಖಲು ಮಾಡಿದ್ದಾರೆ.
ಛತ್ತೀಸ್ಗಢದ ರಾಯಪುರದಲ್ಲಿ ನಡೆದಿದ್ದ ಧರ್ಮ ಸನ್ನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಳಿಚರಣ ಮಹಾರಾಜರು, ಮಹಾತ್ಮ ಗಾಂಧಿ ಹಾಗೂ ಅವರ ಹತ್ಯೆ ಕುರಿತಂತೆ ಹೊಗಳಿ ಮಾತನಾಡಿದ್ದರು.
ಈ ಕುರಿತಂತೆ ಕಾಳಿಚರಣ ಅವರ ವಿರುದ್ಧ ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ಜಿತೇಂದ್ರ ಅವದ್ ಅವರು ದೂರು ದಾಖಲು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಅವರನ್ನು ಮಧ್ಯ ಪ್ರದೇಶದ ಖಜುರಾಹೊದ ವಾಘೇಶ್ವರ ಧಾಮದಲ್ಲಿ ಬಂಧನ ಮಾಡಲಾಗಿತ್ತು. ರಾಯಪುರ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರ್ವಾಲ್ ಈ ಕುರಿತು ಮಾಹಿತಿ ನೀಡಿ ಬಂಧನವನ್ನು ಖಚಿತ ಪಡಿಸಿದ್ದಾರೆ. ಇಂದು ಸಂಜೆ ವೇಳೆ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
Discussion about this post