ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಶ್ರೀಶಾಂತ್ ಅವರು ಸದ್ಯ ತಮ್ಮ ಸಿನಿ ಕರಿಯರ್ ಮೇಲೆ ಹೆಚ್ಚು ಪೋಕಸ್ ಮಾಡುತ್ತಿದ್ದು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಸಮಂತಾ ನಯನತಾರಾ ವಿಜಯ್ ಸೇತುಪತಿ ಅಭಿನಯದ ‘ಕಾದು ವಾಕುಲ ರೆಂಡು ಕಾಧಲ್’ ಚಿತ್ರದಲ್ಲಿ ಶ್ರೀಶಾಂತ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ವಿಘ್ನೇಶ್ ಶಿವನ್ ಕಲ್ಪನೆಯಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಶ್ರೀಶಾಂತ್ ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ನಾನು ಒಂದೊಳ್ಳೆ ಚಿತ್ರತಂಡದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಈ ಸಿನಿಮಾದಲ್ಲಿ ಬರುವ ಒಂದು ಪ್ರಮುಖ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದೇನೆ. ನನ್ನ ಪಾತ್ರದ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ ಅಂತ ಶ್ರೀಶಾಂತ್ ಹೇಳಿದ್ದಾರೆ
Discussion about this post