ಢಾಕಾ: ಬಾಂಗ್ಲಾ ದೇಶದ ದಕ್ಷಿಣ ಭಾಗದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 32 ಮಂದಿ ಸಜೀವ ದಹನ ಆಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂರು ಅಂತಸ್ತಿನ ಓಬಿಜಾನ್ 10 ಹೆಸರಿನ ಹಡಗಿನಲ್ಲಿ ಅಂಗ್ನಿ ಅವಘಡ ಸಂಭವಿಸಿದ್ದು, 32 ಮೃತದೇಹಗಳನ್ನು ಹೊರ ತೆಗೆದಿದ್ದೇವೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಕಿ ಬಿದ್ದ ಕಾರಣದಿಂದ ಆತಂಕಗೊಂಡಿದ್ದ ಹಲವರು ನದಿಗೆ ಹಾರಿದ್ದು, ಈ ವೇಳೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ವಿವರಿಸಿದ್ದಾರೆ.
ಇಂದು ಮುಂಜಾನೆ ಘಟನೆ ನಡೆದಿದ್ದು, ಬಾಂಗ್ಲಾ ದಕ್ಷಿಣ ಪ್ರದೇಶದ ಜಕಾಕತಿ ಟೌನ್ ಬಳಿಯ ನದಿಯಲ್ಲಿ ದುರಂತ ನಡೆದಿದೆ. ರಾಜಧಾನಿ ಯಿಂದ 250 ಕಿಮೀ ದೂರದಲ್ಲಿ ಘಟನೆ ಜರುಗಿದೆ. ನದಿಗಳ ತಗ್ಗು ಪ್ರದೇಶಗಳಾದ ಡೆಲ್ಟಾ ವ್ಯಾಪ್ತಿಯಲ್ಲಿ ಇಂತಹ ದುರಂತಗಳು ಸಂಭವಿಸುತ್ತಿದ್ದು, ಹಡಗುಗಳ ನಿರ್ವಹವಣೆ ಹಾಗೂ ಸೂಕ್ತ ರಕ್ಷಣಾ ಸೌಲಭ್ಯಗಳು ಇಲ್ಲದಿರುವುದೇ ದುರಂತಗಳು ಮರುಕಳುಹಿಸಳು ಕಾರಣ ಎನ್ನಲಾಗಿದೆ.
32 dead in #Bangladesh ferry fire, 100 others injured. boat caught fire in a river in Jhalokati state in Bangladesh, about 200 kilometers south of #Dhaka pic.twitter.com/zqtkfa5AnA
— Sandeep Seth (@sandipseth) December 24, 2021
Discussion about this post