ಸಮಂತಾ ನಾಗಚೈನ್ಯರಿಂದ ಡಿವೋರ್ಸ್ ಪಡೆದ ನಂತರ ತಮ್ಮ ಸಿನಿ ಕೆರಿಯರ್ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾಗೆ ಸಾಕಷ್ಟು ಆಫರ್ಗಳು ಕೂಡ ಹುಡುಕಿಕೊಂಡು ಬರುತ್ತಿದೆ. ಇನ್ನು ಸಮಂತಾ ಹೆಜ್ಜೆ ಹಾಕ್ಕಿದ ಊ ಅಂತೀಯಾ ಮಾವ ಊಂ ಅಂತೀಯಾ ಹಾಡು ಕೂಡ ಸೂಪರ್ ಹಿಟ್ ಆಗಿದ್ದು, ಹೊಸ ದಾಖಲೆಯನ್ನು ಬರೆದಿದೆ.
ಸದ್ಯ ಇದೇ ಖುಷಿಯಲ್ಲಿ ಸಮಂತಾ ತಮ್ಮ ಸ್ನೇಹಿತರ ಜೊತೆ ಗೋವಾ ಟ್ರಿಪ್ಗೆ ಹೋಗಿದ್ದಾರೆ. ಡಿವೋರ್ಸ್ ನಂತರ ಸಮಂತಾ ಸಾಕಷ್ಟು ಬಾರಿ ತಮ್ಮ ಫ್ರೆಂಡ್ಸ್ ಜೊತೆ ಟ್ರಿಪ್ಗೆ ಹೋಗಿ ಬಳಿಕ ಟ್ರಿಪ್ನ್ನ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.
ಅದರಂತೇ ಈ ಬಾರಿ ಸಮಂತಾ ಗೋವಾದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದು, ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಪೋಟೋಗಳನ್ನು ಸಮಂತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಮಂತಾ ಹಾಟ್ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
Discussion about this post