ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಆಟಗಾರರಿಗೆ ಧನ್ಯವಾದ ಅರ್ಪಿಸಲು ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಹಾಗೂ ಇತರೆ ಆಟಗಾರರು ಕಾಣಿಸಿಕೊಂಡ ವಿಶೇಷ ವಿಡಿಯೋ ಸಾಂಗ್ವೊಂದನ್ನು ಬಿಡುಗಡೆ ಮಾಡಿದೆ. ಈ ಸಾಂಗ್ ಅನ್ನ ಯಜುವೇಂದ್ರ ಚಹಲ್ ಪತ್ನಿ ಧನಶ್ರಿ ವರ್ಮಾ ನಿರ್ದೇಶನ ಮಾಡಿದ್ದು, ಹರ್ಷ ಉಪಾಧ್ಯಾಯ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಾಂಗ್ ಅನ್ನ ‘ನೆವರ್ ಗಿವಪ್, ಹಿಂದೆ ತಿರುಗದೆ, ಮುನ್ನುಗ್ಗುತ್ತಿರಿ’ ಎಂದು ತಲೆಬರಹ ನೀಡಿ ಬಿಡುಗಡೆ ಮಾಡಲಾಗಿದ್ದು, ರಾಯಲ್ ಚಾಲೆಂಜರ್ಸ್ ಜರ್ಸಿ ಧರಿಸಿದಾಗ ತಂಡಕ್ಕಾಗಿ ಶೇಕಡಾ 100ರಷ್ಟನ್ನು ನೀಡಿರುವ ನಮ್ಮ ಎಲ್ಲಾ ಆಟಗಾರರಿಗೆ ವಿಶೇಷ ಧನ್ಯವಾದಗಳು ಎಂದು ಫ್ರಾಂಚೈಸಿ ಹೇಳಿದೆ.
Never Give Up. Don’t Back Down. Keep Hustling!
Celebrating togetherness & the #PlayBold spirit of Royal Challengers Bangalore. Special thanks to all our players who give their 100% every time they wear the RCB colours.#WeAreChallengers #MusicVideo #RCBHookStepChallenge pic.twitter.com/Y8tfH3y8Qz
— Royal Challengers Bangalore (@RCBTweets) November 23, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಈ ನೆವರ್ ಗಿವಪ್ ಸಾಂಗ್ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಮ್ಯಾಕ್ಸ್ವೆಲ್, ಪಡಿಕ್ಕಲ್, ಚಹಲ್, ಸೇರಿದಂತೆ ಸಹ ಆಟಗಾರರು ನೃತ್ಯ ಮಾಡಿದ್ದಾರೆ. ಅದರಲ್ಲೂ ಇತ್ತೀಚೆಗೆ ನಿವೃತ್ತಿ ಘೋಷಿಸಿದ ದಕ್ಷಿಣ ಅಫ್ರಿಕಾದ ಎಬಿ ಡಿ ವಿಲಿಯರ್ಸ್ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ.
Discussion about this post