ರಾಯಚೂರು (03-11-2021): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ 8 ದಿನಗಳೆ ಕಳೆದಿದೆ. ಆದರೆ ಅಭಿಮಾನಿಗಳಿಗೆ ಅಪ್ಪು ಇಲ್ಲ ಎನ್ನುವ ಸುದ್ದಿಯನ್ನು ಇನ್ನು ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ದಿಡೀರ್ ಹೃದಯಾಘಾತದ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಲು ಮೂಡಿತ್ತು.
ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿ. ಜಿಲ್ಲಾಧ್ಯಕ್ಷ ಎನ್.ಎಮ್.ಮೈತ್ರೀಕರ್ ಈ ಬಗ್ಗೆ ಮಾತನಾಡಿ, ಅಪ್ಪು ಸಾವಿನ ತನಿಖೆ ಆಗಬೇಕಿದೆ. ಪುನೀತ್ ಅವರ ಸಾವಿನ ಹಿಂದಿನ ರಹಸ್ಯ ಗೊತ್ತಾಗಬೇಕಿದೆ. ಆದ್ದರಿಂದ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪುನೀತ್ ಅವರು, ನಿಧನರಾಗುವ ಹಿಂದಿನ ರಾತ್ರಿ (ಅ.28) ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ತುಂಬಾ ಸಂತಸದಿಂದ ಪಾಲ್ಗೊಂಡು ಹಾಡು, ನೃತ್ಯ ಮಾಡಿದ್ದರು. ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಮಾರನೆಯ ದಿನ ಹೃದಯಾಘಾತ ಆಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಪಾರ್ಟಿಯಲ್ಲಿ ಕಾಣದ ಕೈಗಳು ಕುತಂತ್ರ ನಡೆಸಿ ಊಟ ಅಥವಾ ಕೂಲ್ ಡ್ರಿಂಕ್ಸ್ ಸೇವನೆಯಲ್ಲಿ ಮೋಸ ನಡೆದಿರಬಹುದು. ವಿಷಪ್ರಾಷನ ಆಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಿರುವ ಎನ್.ಎಮ್.ಮೈತ್ರೀಕರ್, ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
Discussion about this post