ಪೆಟ್ರೋಲ್, ಆಯ್ತು, ಡಿಸೇಲ್ ಆಯ್ತು, ಇದೀಗ ಸಿಮೆಂಟ್ ಸರದಿ ಇನ್ನೇನು ಕೆಲವೇ ದಿನಗಳಲ್ಲಿ ಸಿಮೆಂಟ್ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು ಸಿಮೆಂಟ್ ಬೆಲೆ ಏರಿಕೆ ಕಾಣುವುದು ಎಂದು ಖ್ಯಾತ ರೇಟಿಂಗ್ ಏಜೆನ್ಸಿಯಾದ ಏಜೆನ್ಸಿ ಕ್ರಿಸಿಲ್ ಎಂಬ ಕಂಪನಿ ವರದಿ ಮಾಡಿದೆ.
.2020ರ ವೇಳೆ ಕೊರೊನಾ ಕಾರಣಕ್ಕೆ ಸಿಮೆಂಟ್ ಬೇಡಿಕೆಯಲ್ಲಿ ಕುಸಿತವಾಗಿತ್ತು. ಆದರೆ ಈ ಆರ್ಥಿಕ ವರ್ಷದಲ್ಲಿ ಸಿಮೆಂಟ್ ಬೇಡಿಕೆ ಪ್ರಮಾಣ ಶೇ.11ರಿಂದ 13 ರಷ್ಟು ದಿಢೀರ್ ಏರಿಕೆ ಕಂಡ ಪರಿಣಾಮ ಒಂದು ಚೀಲದ ಸಿಮೆಂಟ್ ಬೆಲೆ 15-20 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ.
ಇದಲ್ಲದೆ ಸಿಮೆಂಟ್ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಸಿಮೆಂಟ್ ದರ ದುಬಾರಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ 50 ಕೇಜಿ ಚೀಲದ ಸಿಮೆಂಟ್ಗೆ 360 ಇರುವ ಬೆಲೆ 400ರೂ. ಮುಟ್ಟಲಿದೆ ಎನ್ನಲಾಗಿದೆ.
Discussion about this post