ಬೆಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ (omicron ) ತಳಿಯ ಕೊರೊನಾ ಪತ್ತೆಯಾಗಿದ್ದು, ಅದು ಕರ್ನಾಟಕದಲ್ಲೇ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. 66 ವರ್ಷದ ವೃದ್ಧ, 46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕದ ಮೂಲಕವೇ ಭಾರತಕ್ಕೆ ಒಮಿಕ್ರಾನ್ ಎಂಟ್ರಿ ಕೊಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್ ವೈರಸ್ ದೃಢವಾಗಿದ್ದು, ಈ ಪೈಕಿ ಬೆಂಗಳೂರಿನ ಒಬ್ಬರಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಓರ್ವ ಸೋಂಕಿತ ವಾಪಸ್ ವಿದೇಶಕ್ಕೆ ಹೋಗಿರುವ ಮಾಹಿತಿ ಇದೆ. ಕೇಸ್ ಪತ್ತೆಯಾಗಿರುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಿ. ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಂದ ದೂರವಿರಿ ಅಂತ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಒಮಿಕ್ರಾನ್ ವೈರಸ್ನ ತೀವ್ರತೆ ಐದು ಪಟ್ಟು ಹೆಚ್ಚಾಗಿರಲಿದೆ. ಡೆಲ್ಟಾ ವೈರಸ್ಗಿಂತ ಒಮಿಕ್ರಾನ್ ತೀವ್ರತೆ 5 ಪಟ್ಟು ಹೆಚ್ಚಾಗಿರುತ್ತದೆ ಅಂತ ದೆಹಲಿಯಲ್ಲಿ ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.
ಒಮಿಕ್ರಾನ್ ದೃಢಪಟ್ಟ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಟಿವಿ9ಗೆ ಲಭ್ಯವಾಗಿದೆ. ವ್ಯಕ್ತಿಯೊಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಿದ್ದರು. 20ನೇ ತಾರೀಖಿನಂದು ಬೆಂಗಳೂರಿನ ಏರ್ಪೋರ್ಟ್ಗೆ ಬಂದಿದ್ದರು. 23ನೇ ತಾರೀಖಿನಂದು ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಏರ್ಪೋರ್ಟ್ನಲ್ಲಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಕಂಡುಬಂದಿತ್ತು. ದಕ್ಷಿಣ ಆಫ್ರಿಕಾ ನಿವಾಸಿಯಾಗಿದ್ದ ಪ್ರಯಾಣಿಕನಿಗೆ ಕೊವಿಡ್ ಪಾಸಿಟಿವ್ ಆಗಿತ್ತು. ಪಾಸಿಟಿವ್ ಹಿನ್ನೆಲೆ ಹೋಟೆಲ್ನಲ್ಲಿ ಕ್ವಾರೆಂಟೈನ್ ಒಳಗಾಗಿದ್ದರು. ಮೂರನೇ ದಿನದ ವರದಿ ನೆಗೆಟಿವ್ ಎಂದು ಬಂದಿತ್ತು. ನೆಗೆಟಿವ್ ಬಂದ ಕಾರಣ ಬಳಿಕ ನೇರವಾಗಿ ಬೊಮ್ಮಸಂದ್ರಕ್ಕೆ ಬಂದಿದ್ದಾರೆ. ಹೋಂ ಕ್ವಾರಂಟೈನ್ ಆಗದೇ ವ್ಯಕ್ತಿ ಸೀದಾ ಮೀಟಿಂಗ್ ಅಟೆಂಡ್ ಆಗಿದ್ದಾರೆ.
Discussion about this post