ನವದೆಹಲಿ: ಕೊರೊನಾ ಒಮಿಕ್ರಾನ್ ರೂಪಾಂತರಿ ಬಗ್ಗೆ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಒಮಿಕ್ರಾನ್‌ನ 30ಕ್ಕೂ ಹೆಚ್ಚು ಬಾರಿ ರೂಪಾಂತರ ಹೊಂದಿದೆ ಎಂದಿದ್ದಾರೆ.
ಇದರ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕಾಗಿದೆ
ಹೊಸ ತಳಿ, ಈಗಾಗಲೇ ಹಾಕಿಸಿಕೊಂಡ ಲಸಿಕೆಯ ಪರಿಣಾಮವನ್ನು ಸಹ ತೊಡೆದು ಹಾಕಬಹುದು ಅಂತ ಗುಲೇರಿಯಾ ತಿಳಿಸಿದ್ದಾರೆ.
ಭಯ ಬೇಡ ಎಂದ ಮತ್ತೊಬ್ಬ ತಜ್ಞರು
ಮತ್ತೊಂದು ಕಡೆ ಒಮಿಕ್ರಾನ್ ಬಗ್ಗೆ ಭೀತಿಗೊಳಗಾಗಲು ಯಾವುದೇ ಕಾರಣಗಳಿಲ್ಲ ಎಂದು ರಷ್ಯಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಮೆಲಿಟಾ ವುಜ್ನೋವಿಕ್ ಹೇಳಿದ್ದಾರೆ. ಕೋವಿಡ್ ರೂಪಾಂತರಿ ಒಮಿಕ್ರಾನ್ ಬಗ್ಗೆ ಭಯ-ಭೀತಿಗೆ ಒಳಗಾಗುವ ಅಗತ್ಯವಿದೆ ಎಂದು ನನಗೆ ಅನಿಸುತ್ತಿಲ್ಲ.
ಏಕೆಂದರೆ ಲಸಿಕೆಯು ಹೊಸ ತಳಿಯ ವಿರುದ್ಧ ಯಾವ ಸಾಮರ್ಥ್ಯದಲ್ಲಿ ಹೋರಾಡುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಈ ವೈರಸ್ ಮತ್ತು ಲಸಿಕೆಯನ್ನು ಬೈಪಾಸ್ ಮಾಡಿದರೆ ಲಸಿಕೆಯ ಪರಿಣಾಮಕಾರಿತ್ವವನ್ನು ಅರಿತುಕೊಳ್ಳಬಹುದು ಎಂದು ಮೆಲಿಟಾ ಹೇಳಿದ್ದಾರೆ. ಒಮಿಕ್ರಾನ್ ಈ ಮೊದಲು ಬಂದಿರುವ ಎಲ್ಲಾ ರೂಪಾಂತರಿಗಿಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರಬಹುದು ಎಂದು ವುಜ್ನೋವಿಕ್ ಕೂಡ ಅಂದಾಜಿಸಿದ್ದಾರೆ.
Discussion about this post