ಬೆಂಗಳೂರು: ಒಮಿಕ್ರಾನ್ ಸೋಂಕಿಗೆ ಸಂಬಂಧಿಸಿದಂತೆ 5 ಜನರ ರಿಪೋರ್ಟ್ ಇನ್ನೂ ಬಂದಿಲ್ಲ. ಬಂದ ಕೂಡಲೇ ಮಾಹಿತಿ ಕೊಡ್ತೀವಿ. ನಮ್ಮ ರಾಜ್ಯದಲ್ಲಿ ಓಮಿಕ್ರಾನ್ ಬಂದ ಸಂಪರ್ಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಪರ್ಕಿತರು ಎರಡು ಡೋಸ್ ತಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಎರಡು ಡೋಸ್ ಪಡೆದವರಿಗೆ ತೀವ್ರತೆ ಇರೋದಿಲ್ಲ. ಹೀಗಾಗಿ ಜನ ಎರಡು ಡೋಸ್ ಪಡೆಯಬೇಕು. ಸಂಪೂರ್ಣ ರೋಗ ನಿರೋಧಕ ಬರಬೇಕಾದ್ರೆ ಎರಡು ಡೋಸ್ ಪಡೆಯಬೇಕು. ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಡೆಲ್ಟಾವನ್ನು ನಾವು ಎದುರಿಸಿದ್ದೇವೆ. ಒಮಿಕ್ರಾನ್ ಹರಡುವಿಕೆ ಇದೆ. ಆದರೆ ತೀವ್ರತೆ ಇಲ್ಲ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಅಂತಾರಾಷ್ಟ್ರೀಯ ವಿಮಾನ ಸ್ಥಗಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಕೇಂದ್ರ ಈ ಬಗ್ಗೆ ಅಧ್ಯಯನ ಮಾಡ್ತಿದೆ. ಸಮಗ್ರ
Discussion about this post