ರೈಡರ್ ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಲು ಬರುತ್ತಿದ್ದಾರೆ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರ್.. ಹಾಡು , ಟೀಸರ್ , ಟ್ರೈಲರ್ಗಳಿಂದ ಈಗಾಗಲೇ ರೈಡರ್ ಸಿನಿಮಾ ನಿರೀಕ್ಷೆಯನ್ನ ಮೂಡಿಸಿದೆ.. ಇಂತಹ ಟೈಮ್ನಲ್ಲಿ ಕನ್ನಡ ಪ್ರೇಕ್ಷಕರಿಗೆ ಯುವರಾಜ ನಿಖಿಲ್ ಕುಮಾರ್ ಒಂದು ಮಾತನ್ನ ಹೇಳಿದ್ದಾರೆ..
ಹಾಗಾದ್ರೆ ಅದೇನು ಅನ್ನೋದನ್ನ ಅವರಿಂದಲೇ ತಿಳಿಯೋಣ ಬನ್ನಿ..
ಜಾಗ್ವಾರ್, ಕುರುಕ್ಷೇತ್ರ ಹಾಗೂ ಸೀತಾರಾಮ ಕಲ್ಯಾಣ ಚಿತ್ರಗಳ ನಂತರ ರೈಡರ್ ಸಿನಿಮಾದ ಮೂಲಕ ಕಾಣಿಸಿಕೊಳ್ತಿದ್ದಾರೆ.. ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಲಹರಿ ಕಂಪನಿಯ ಒಡೆತನದಲ್ಲಿ ಅದ್ಧೂರಿಯಾಗಿಯೇ ಮೂಡಿಬಂದಿದೆ ರೈಡರ್ ಸಿನಿಮಾ.. ಲವ್ , ಸೆಂಟಿಮೆಂಟ್ , ಥ್ರಿಲ್, ಡ್ರಾಮಾ, ಆಯಕ್ಷನ್ ಈ ರೀತಿಯ ಎಲ್ಲಾ ಎಮೋಷನಲ್ಗಳನ್ನ ಬೆರಸಿಕೊಂಡು ರೈಡರ್ ಸಿನಿಮಾದ ಮೂಲಕ ಬರುತ್ತಿದ್ದಾರೆ ಯುವರಾಜ ನಿಖಿಲ್ ಕಮಾರ್.. ರೈಡರ್ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡ್ತಿದೆ.. ಈ ಸಿನಿಮಾಕ್ಕಾಗಿ ಥಿಯೇಟರ್ಗೆ ಹೋದ್ರೆ ಪಕ್ಕಾ ಎಂಟರ್ಟೈನ್ಮೆಂಟ್ ಸಿಕ್ಕಿ ಸಿಗುತ್ತೆ ಅನ್ನೋ ನಂಬಿಕೆ ರೈಡರ್ ಸಿನಿಮಾದ ಟ್ರೈಲರ್ನಿಂದ ಸಿಕ್ಕಿದೆ.. ಟ್ರೈಲರ್ ಸಕ್ಸಸ್ ಆದ ಹಿನ್ನೆಯಲ್ಲಿ ರೈಡರ್ ಚಿತ್ರತಂಡ ಟ್ರೈಲರ್ ಸಕ್ಸಸ್ ಮಿಟ್ ಮಾಡಿದೆ.
ನಿಖಿಲ್ ಕುಮಾರ್ ಅವರ ಕುಟುಂಬ ರಾಜಕೀಯ ಕುಟುಂಬವು ಹೌದು ಸಿನಿಮಾ ಕುಟುಂಬವೂ ಹೌದು.. ಈ ಕಾರಣದಿಂದಾಗಿ ನಿಖಿಲ್ ಕುಮಾರ್ ಅವರಿಗೆ ಸಾಮಾಜಿಕ ಕಳಕಳೆಯೂ ಇದೆ ಸಿನಿಮಾ ಕಳಕಳೆಯೂ ಇದೆ.. ಇನೇನು ಕೆಲವೇ ದಿನಗಳಲ್ಲಿ ರೈಡರ್ ಸಿನಿಮಾ ಸಮಸ್ತ ಕನ್ನಡ ಪ್ರೇಕ್ಷಕರ ಮುಂದೆ ಬರಲಿದೆ.. ಇಂತಹ ಟೈಮ್ನಲ್ಲಿ ಕನ್ನಡ ಪ್ರೇಕ್ಷಕರಿಗೆ ನಿಖಿಲ್ ಮನಸಾರೆ ಮನವಿಯೊಂದನ್ನ ಮಾಡಿದ್ದಾರೆ.
ಪರಭಾಷಾ ಹಾವಳಿ ಅಂದಕಾಲದಿಂದಲೂ ಕನ್ನಡ ಸಿನಿಮಾರಂಗಕ್ಕೆ ಶತ್ರು. ಈಗ ಡಬ್ಬಿಂಗ್ ಹೆಸರಿನಲ್ಲಿ ಪರಭಾಷ ಸಿನಿ ಪ್ರಾಡಕ್ಟಗಳು ಸುಮ್ನೆ ನೆಪಕ್ಕಾಗಿ ಬರುತ್ತಿದ್ದರು ಕನ್ನಡ ಸಿನಿಮಾರಂಗ ಸಿನಿಮಾಗಳಿಗೆ ಹೊಡೆತ ಕೊಡ್ತಾನೆ ಇವೆ.. ಈ ವಿಚಾರವನ್ನ ಮಾಧ್ಯಮಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಕನ್ನಡ ಸಿನಿಮಾಗಳನ್ನ ಥಿಯೇಟರ್ಗೆ ಬನ್ನಿ ಕನ್ನಡ ಸಿನಿಮಾಗಳನ್ನ ಉಳಿಸಿ ನಿರ್ಮಾಪಕರನ್ನ ಕಾಪಾಡಿ ಎಂದು ರೈಡರ್ ಟೀಮ್ ಮನವಿ ಮಾಡಿಕೊಂಡಿದೆ.
#Rider Trailer Success meet
Live now https://t.co/0NTFPwGZeo@Nikhil_Kumar_k @kashmira_9 @directorvijays #SunilGowda @ArjunJanyaMusic @LahariMusic @LahariFilm pic.twitter.com/E2xH0glXZi
— Lahari Music (@LahariMusic) December 19, 2021
Discussion about this post