• About us
  • Advertise with us
  • Reach us
Tuesday, August 9, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ಕ್ರೀಡೆ

ಶಾಕಿಂಗ್ ನ್ಯೂಸ್: ಇನ್ನೆರಡು ದಿನಗಳಲ್ಲಿ ಟೀಮ್ ಇಂಡಿಯಾ ಏಕದಿನ-ಟಿ20ಗೆ ಹೊಸ ನಾಯಕನ ಘೋಷಣೆ

ಬಿಸಿಸಿಐ ಇನ್ನೆರಡು ದಿನಗಳಲ್ಲಿ ಸಭೆ ಸೇರಲಿದೆಯಂತೆ. ಈ ಸಂದರ್ಭ ಟೀಮ್ ಇಂಡಿಯಾ ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡಲಿದ್ದು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share on FacebookShare on TwitterShare on Whatsapp

ಕ್ರಿಕೆಟ್ (Cricket) ವಲಯದಲ್ಲಿ ಅಚ್ಚರಿ ಎಂಬಂತ ಬೆಳವಣಿಗೆ ನಡೆಯುತ್ತಿದ್ದು ಇನ್ನು ಎರಡು ದಿನಗಳ ಒಳಗೆ ಭಾರತೀಯ ಕ್ರಿಕೆಟ್​ನ (Indian Cricket Team) ಏಕದಿನ ಮತ್ತು ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ ಆಗಲಿದೆಯಂತೆ (India’s T20 AND ODI Captain). ಈ ಬಗ್ಗೆ ಬಿಸಿಸಿಐ (BCCI) ಮೂಲಗಳು ಮಾಹಿತಿ ನೀಡಿವೆ. ಚುಟುಕು ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ (Virat Kohli) ನಾಯಕತ್ವದ ಅವಧಿ ಟಿ20 ವಿಶ್ವಕಪ್ (T20 World Cup)​ ಮುಗಿದ ಬೆನ್ನಲ್ಲೇ ಅಂತ್ಯಗೊಳ್ಳಲಿದೆ. ಏಕದಿನ ಕ್ರಿಕೆಟ್​ಗೆ ಕೊಹ್ಲಿಯೇ ನಾಯಕನಾಗಿ ಇರುತ್ತಾರೆ ಎನ್ನಲಾಗಿತ್ತು. ಆದರೆ, ಸದ್ಯದ ಮಾಹಿತಿಯ ಪ್ರಕಾರ ಕೊಹ್ಲಿ ಏಕದಿನ ಕ್ರಿಕೆಟ್​ ನಾಯಕತ್ವದಿಂದಲೂ ಹಿಂದೆ ಸರಿಯಲಿದ್ದಾರಂತೆ. ರೋಹಿತ್ ಶರ್ಮಾ (Rohit Sharma) ಅವರು ಏಕದಿನ ಮತ್ತು ಟಿ20 ಎರಡೂ ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಟಿ20 ವಿಶ್ವಕಪ್ ಮುಗಿದ ಬಳಿಕ ನ. 17 ರಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಆಟಗಾರರ ಆಯ್ಕೆಗಾಗಿ ಬಿಸಿಸಿಐ ಇನ್ನೆರಡು ದಿನಗಳಲ್ಲಿ ಸಭೆ ಕರೆದಿದೆ. ಈ ಸಂದರ್ಭ ಟೀಮ್ ಇಂಡಿಯಾ ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಿದೆಯಂತೆ.

ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿಸುವ ಸಾಧ್ಯತೆ ಇದೆ. ತಂಡದ ಒಟ್ಟಾರೆ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ. ಮುಂದಿನ ದಿನದಲ್ಲಿ ಸಭೆ ನಡೆಯಲಿದ್ದು ಈ ವಿಚಾರದ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

‘ಮೂರು ಮಾದರಿಯ ಕ್ರಿಕೆಟ್​ಗೆ ಮೂರು ನಾಯಕರಿದ್ದರೆ ಗೊಂದಲಗಳು ಉಂಟಾಗುತ್ತಿದೆ. ಟಿ20 ಮತ್ತು ಏಕದಿನ ದಿನಕ್ಕೆ ಒಬ್ಬರೆ ನಾಯಕನಾಗಬೇಕು, ಇದಕ್ಕೆ ರೋಹಿತ್ ಶರ್ಮಾ ಉತ್ತಮ ಆಯ್ಕೆ. ಅಂತಿಮ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳುತ್ತೇವೆ. ನಾವು ಏನೆ ನಿರ್ಧಾರ ತೆಗೆದುಕೊಂಡರು ಅದು ಭಾರತ ತಂಡದ ಭವಿಷ್ಯಕ್ಕಾಗಿ, ಒಳಿತಿಗಾಗಿ’ ಎಂದು ಹೇಳಿದ್ದಾರೆ.

ಚುಟುಕು ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು, ಭಾರತ ಟಿ-20 ಕ್ರಿಕೆಟ್​ನಿಂದ ಟಿ-20 ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸುವುದಾಗಿ ಘೋಷಣೆ ಮಾಡಿದ್ದರು. ನಾಯಕತ್ವ ಬಿಟ್ಟುಕೊಟ್ಟು ಬ್ಯಾಟ್ಸ್​ಮನ್​ ಆಗಿ ಮುಂದುವರೆಯುತ್ತೇನೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ನನ್ನ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಕೊಹ್ಲಿ ಹೇಳಿದ್ದರು.

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೊಹ್ಲಿಯ ನಂತರ ಭಾರತ ಟಿ-20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ. ಇದರ ಜೊತೆಗೆ ಏಕದಿನಕ್ಕೂ ನಾಯಕನಾಗಲಿದ್ದಾರೆ. ಸದ್ಯ ವೈಟ್ ಬಾಲ್ ಕ್ರಿಕೆಟ್​ನ ಉಪ ನಾಯಕನಾಗಿರುವ ಹಿಟ್​ಮ್ಯಾನ್ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಉಪ ನಾಯಕನ ಪಟ್ಟ ಕೆ. ಎಲ್ ರಾಹುಲ್​ಗೆ ನೀಡಲಿದ್ದಾರೆ ಎಂಬ ಮಾತುಗಳು ಕೂಡ ಇದೆ.

Related Stories

ಟಾಪ್-ನ್ಯೂಸ್

IPLನಲ್ಲಿ ನಾಲ್ವರು ರಾಹುಲ್.. ಯಾರು ಯಾರ ಪಾಲು..? ಉಡಿ ತುಂಬೋದ್ಯಾರು..?!

February 14, 2022
ಟಾಪ್-ನ್ಯೂಸ್

IPL​ ಕಣದಲ್ಲಿ 16 ಕನ್ನಡಿಗರು.. RCBಯಿಂದ ತಾತ್ಸಾರ; ಆದ್ರೆ ಯಾವ ತಂಡಗಳಲ್ಲಿ ಡಿಮ್ಯಾಂಡ್..?

February 14, 2022
ಕ್ರೀಡೆ

RCB ಆಟಗಾರನ ಕನ್ನಡ ಪ್ರೇಮ.. ಮೊದಲ ದಿನವೇ ಕನ್ನಡಿಗರ ಹೃದಯಗೆದ್ದ ಆಟಗಾರ

February 14, 2022
ಟಾಪ್-ನ್ಯೂಸ್

IPL ಮೆಗಾ ಹರಾಜು: ಸ್ಫೋಟಕ ಆಟಗಾರನಿಗೆ ಗಾಳ ಹಾಕಿ ಗೆದ್ದ RCB

February 13, 2022
Next Post

‘ಅಭಿಮಾನಿಗಳಿಗೆ ಖಂಡಿತಾ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಕೊಡ್ತೀವಿ, ಆದರೆ 2 ದಿನ ಕಾಯಿರಿ’: ಶಿವಣ್ಣ

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: