Nora Fatehi Viral Video – ಬಾಲಿವುಡ್ ನ ಖ್ಯಾತ ನೃತ್ಯಗಾರ್ತಿ ಹಾಗೂ ನಟಿ ನೋರಾ ಫತೇಹಿ (Nora Fatehi) ಕೆಲವೇ ಭಾರಿ ಸೀಮೀತಾವಧಿಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾಳೆ. ಈ ಹಿಂದೆ ಆಕೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾಳೆ. ತನ್ನ ಪರಿಪೂರ್ಣ ವ್ಯಕ್ತಿತ್ವಕ್ಕಾಗಿ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಸಂಪಾದಿಸುತ್ತಾಳೆ. ಆದರೆ, ಇದೀಗ ನೋರಾಳ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದ್ದು ಅಭಿಮಾನಿಗಳ ದಿಲ್ ಬ್ರೇಕ್ ಆಗುವಂತಿದೆ. ಏಕೆಂದರೆ ಈ ವಿಡಿಯೋದಲ್ಲಿ ನೋರಾ ನಿಗೂಢ ವ್ಯಕ್ತಿಯ (Nora Fatehi Mystery Boy)ಜೊತೆಗೆ ಈಜು ಕೊಳದಲ್ಲಿ ಮಸ್ತಿಗಿಳಿದಿದ್ದಾಳೆ. ನೋರಾಳ ಈ ಖಾಸಗಿ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಾಣಿಸಿಕೊಂಡ ಮಿಸ್ಟ್ರಿ ಬಾಯ್ ಯಾರು?
ಈ ವಿಡಿಯೋದಲ್ಲಿ ನೋರಾ ಕಿತ್ತಳೆ ಬಣ್ಣದ ಆಫ್ ಶೋಲ್ದರ್ ಬಿಕಿನಿಯಲ್ಲಿ ಈಜುಕೊಳದಲ್ಲಿ ಮಸ್ತಿ ಮಾಡುತ್ತಿದ್ದಾಳೆ. ಆಕೆ ತನ್ನ ಕೇಶದ ಬನ್ ತಯಾರಿಸಿ, ತುಂಬಾ ರಿಲ್ಯಾಕ್ಸ್ ಮೂಡ್ ನಲ್ಲಿರುವಂತೆ ತೋರುತ್ತಿದೆ. ಈ ಈಜುಕೊಳದಲ್ಲಿ ನೋರಾಳ ಸ್ನೇಹಿತ ಕೂಡ ಇದ್ದಾನೆ. ಈ ವಿಡಿಯೋ ಅನ್ನು ಮೊಬೈಲ್ ಮೂಲಕ ಚಿತ್ರೀಕರಿಸಲಾಗಿದೆ. ನೋರಾಳ ಈ ಮಿಸ್ಟರಿ ಬಾಯ್ ಹೆಸರು ಸ್ಟೀವನ್ ರಾಯ್ ಥಾಮಸ್ ಆಗಿದೆ (Steven Roy Thomas), Watch Video…
https://www.instagram.com/p/CUzgmikDr-4/
ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ
ನೋರಾ ತಂಡ ಹಂಚಿಕೊಂಡಿರುವ ಈ ವಿಡಿಯೋಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ನೋಡಿದವರೆಲ್ಲ ಪ್ರಶಂಸೆಯ ಸುರಿಮಳೆಗೈಯ್ಯುತ್ತಿದ್ದಾರೆ. ಈ ವಿಡಿಯೋ ಅನ್ನು ನೋರಾಳ ಫ್ಯಾನ್ ಪೇಜ್ ನಲ್ಲಿ (TeamNoraFatehi) ಹಂಚಿಕೊಳ್ಳಲಾಗಿದೆ. ಅಭಿಮಾನಿಗಳು ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಆದರೆ ಇದು ನೋರಾಳ ಹಳೆ ವಿಡಿಯೋ ಎಂಬಂತೆ ತೋರುತ್ತಿದೆ. Steven Roy Thomas ಜೊತೆಗೆ ನೋರಾ ಹಲವು ಬಾರಿ ಕಾಣಿಸಿಕೊಂಡಿದ್ದಾಳೆ ಎಂಬುದು ಇಲ್ಲಿ ಉಲ್ಲೇಖನೀಯ.
ನೋರಾ ವೃತ್ತಿ ಜೀವನದ ಕುರಿತು ಹೇಳುವುದಾದರೆ, ನೋರಾ ಇತ್ತೀಚಿಗೆ ತೆರೆಕಂಡ ‘Bhuj-ದಿ ಪ್ರೈಡ್ ಆಫ್ ಇಂಡಿಯಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಳು. ನೋರಾ ದಿಲ್ಬರ್ ಹಾಗೂ ಗರ್ಮಿಗಳಂತಹ ಹಾಡುಗಳ ಮೂಲಕ ತನ್ನ ವಿಶಿಷ್ಟ ಛಾಪು ಮೂಡಿಸಿದ್ದಾಳೆ. ಇನ್ನೊಂದೆಡೆ ಓರ್ವ ನಟಿಯಾಗಿ ಕೂಡ ನೋರಾ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದ್ದಾಳೆ.
Discussion about this post