• About us
  • Advertise with us
  • Reach us
Wednesday, August 10, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ರಾಜ್ಯ

ಭಾರೀ ಮಳೆಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ

ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಆಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತದಿಂದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಮುಂದುವರೆಯಲಿದೆ.

Share on FacebookShare on TwitterShare on Whatsapp

ಕರ್ನಾಟಕದ ಕರಾವಳಿ, ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಿದೆ. ಹಾಗೇ, ಕಳೆದ ವಾರದಿಂದ ರಾಜ್ಯದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ರಾಜ್ಯದಲ್ಲಿ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದಾರೆ ಮತ್ತು 15ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್​ (Orange Alert) ಘೋಷಿಸಲಾಗಿದೆ.

ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಸತತ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯ 11 ವರ್ಷಗಳ ನಂತರ ಗರಿಷ್ಠ ಮಟ್ಟ ತಲುಪಿದೆ. ಜಲಾಶಯದ ಎರಡು ಗೇಟ್‌ಗಳಿಂದ 900 ಕ್ಯೂಸೆಕ್ಸ್​ ನೀರು ಬಿಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಆಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತದಿಂದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಮುಂದುವರೆಯಲಿದೆ. ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪರಿಣಾಮ ಚೆನ್ನೈ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಳೆ ಮತ್ತು ಪ್ರವಾಹ ಉಂಟಾಗಿದೆ. ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆ ಅಬ್ಬರಿಸಿದೆ. ಕರಾವಳಿಯಲ್ಲಿ ಇಂದು ಗಂಟೆಗೆ 40ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Rainfall Forecast: Widespread light to moderate rains with isolated heavy rains likely over Malnad, NIK, and SIK districts and widespread very light to moderate rains likely over Coastal Karnataka districts.
Thunderstorm with lightning likely at isolated places over the State. pic.twitter.com/idwbSyhCsl

— KSNDMC (@KarnatakaSNDMC) November 15, 2021

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಒಡಿಶಾ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಗುಡುಗು ಸಹಿತ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಗಂಗಾನದಿ ಪಶ್ಚಿಮ ಬಂಗಾಳ, ಕೊಂಕಣ ಮತ್ತು ಗೋವಾ, ಮರಾಠವಾಡ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ವಾಯುಭಾರ ಕುಸಿತದ ಪ್ರಭಾವದಿಂದ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ಶುಕ್ರವಾರದವರೆಗೆ ಭಾರೀ ಮಳೆ ಸುರಿಯಲಿದೆ.

Related Stories

ರಾಜ್ಯ

ಮೈದುಂಬಿ ಹರಿಯುತ್ತಿರುವ ‘ಭರಚುಕ್ಕಿ’

July 12, 2022
ಮಂಡ್ಯ

ಮದ್ದೂರು ತಾಲೂಕಿನಲ್ಲಿ ಕೊಂಡೋತ್ಸವ ವೇಳೆ ಭಾರಿ ಅವಘಡ..!

March 29, 2022
ಟಾಪ್-ನ್ಯೂಸ್

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕುರಿಗಾಯಿ ಮತ್ತು ಕುರಿಗಳು ಸಾವು

March 29, 2022
ಟಾಪ್-ನ್ಯೂಸ್

ಚಾಣಕ್ಯನ ಪ್ರತಿಪಾದನೆ ಮೂಲಕ ಸಂಪುಟದಲ್ಲಿ ಸ್ಥಳೀಯರಿಗೆ ಅವಕಾಶ ಕೊಡಿ-ರಾಮದಾಸ್

March 19, 2022
Next Post

‘ಗಂಧದ ಗುಡಿ’ಯಂತೆಯೇ ಮತ್ತೊಂದು ಮಹತ್ತರ ಯೋಜನೆಯ ತಯಾರಿಯಲ್ಲಿದ್ದ ಪುನೀತ್; ಅಪ್ಪು ಕನಸನ್ನು ಹಂಚಿಕೊಂಡ ನವೀನ್ ಸಜ್ಜು

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: