ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ತವರು ನೆಲಕ್ಕೆ ಆಗಮಿಸಿ 64 ದಿನ ಕಳೆದರೂ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳದೇ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ನೀಡಿದ ಎಂಟು ವಾರಗಳ ಕಾಲಾವಕಾಶ ಮುಕ್ತಾಯ ಹಂತಕ್ಕೆ ಬಂದಿದ್ದು, ಗಣಿ ಧಣಿ ಮಾತ್ರ ಯಾಕೋ ಅಭಿಮಾನಿಗಳು, ಕಾರ್ಯಕರ್ತರಿಂದ ಅಂತರ ಕಾಪಾಡಿಕೊಂಡಿದ್ದಾರೆ. ಆಗಸ್ಟ್ 19 ವರಮಹಾಲಕ್ಷ್ಮಿ ಹಬ್ಬದಂದು ಬಳ್ಳಾರಿಗೆ ಮಾಜಿ ಸಚಿವ ಕಾಲಿಡುತ್ತಿದ್ದಂತೆ ಆಪ್ತನಿಗೆ ಬುಡಾ ಅಧ್ಯಕ್ಷ ಸ್ಥಾನ ಒಲಿದಿತ್ತು. ಆಗಮನದ ಆರಂಭದಲ್ಲೆ ಸಾಕಷ್ಟು ನೀರಿಕ್ಷೆಗಳು ಮುಗಿಲೇತ್ತರಕ್ಕೆ ಏರಿದ್ದವು. ಆದರೆ ಸದ್ಯ ಜನಾರ್ದನ ರೆಡ್ಡಿ ಮನೆಯಿಂದ ಹೊರಬಾರದೆ ಫುಲ್ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.
ಇನ್ನು ಬಳ್ಳಾರಿಗೆ ಬಂದ ದಿನವೇ ಅಧಿಕಾರ ಕೊಡಿಸಿದ್ದಲ್ಲದೇ ರಾಜಕೀಯ ಬ್ಯಾನರ್ ಗಳಲ್ಲಿ ರೆಡ್ಡಿ ಫೋಟೋ ರಾರಾಜಿಸುತ್ತಿತ್ತು. ಕಳೆದೊಂದು ದಶಕದಿಂದ ರೆಡ್ಡಿ ಭಾವಚಿತ್ರವಿರುವ ಬ್ಯಾನರ್ಗಳೇ ಕಣ್ಮರೆಯಾಗಿದ್ದವಂತೆ. ಬಳ್ಳಾರಿಯ ಎಸ್ಪಿ ಸರ್ಕಲ್ ನಲ್ಲಿ ನೂತನ ಅಧ್ಯಕ್ಷರೊಂದಿಗೆ ರೆಡ್ಡಿ ಫೋಟೋ ರಾರಾಜಿಸಿದ್ದವು. ಆರ್ಭಟಿಸಿದ್ದವು, ಆದರೆ ಮಾಜಿ ಸಚಿವ ಮನೆ ಬಿಟ್ಟು ಹೊರಗೆ ಬಾರದೇ ಸೈಲೆಂಟ್ ಆಗಿದ್ದು ಅಭಿಮಾನಿಗಳ ಮತ್ತು ಕಾರ್ಯಕರ್ತರ ಬೇಸರ ತರಿಸಿದೆ.
ಇದನ್ನೂ ಓದಿ :
Discussion about this post