ಬೆಂಗಳೂರು: ಕೋರಮಂಗಲದ ಪಬ್ನಲ್ಲಿ ಜಿಎಸ್ಟಿ ಇನ್ಸ್ಪೆಕ್ಟರ್ ಒಬ್ಬರನ್ನು ಕೂಡಿಹಾಕಿ, ಪಬ್ ಮಾಲಿಕ ಮತ್ತು ಬೌನ್ಸರ್ಗಳು ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರಿ ಹ್ಯಾಪಿ ಬ್ರೋ ಪಬ್ ಗೆ ಬಂದಿದ್ದ ಜಿಎಸ್ಟಿ ಇನ್ಸ್ಪೆಕ್ಟರ್ ವಿನಯ್ ಮಂಡಲ್ ಭೇಟಿ ನೀಡಿದ್ದರು. ನೈಟ್ ಪಾರ್ಟಿ ನಡುವೆ ಪಬ್ ಮಾಲಿಕ ರಾಕೇಶ್ ಗೌಡ ತೆರಿಗೆ ಅಧಿಕಾರಿ ಬಳಿ ಬಂದು ಪರಿಚಯ ಮಾಡಿಕೊಂಡಿದ್ದ. ತಡರಾತ್ರಿ ಹನ್ನೆರಡು ಗಂಟೆ ಬಳಿಕ ಬಿಲ್ ಕೇಳಿದ್ದ. ಆಗ ಅವರಿಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ರಾತ್ರಿ ಒಂದು ಗಂಟೆಯವರೆಗೂ ಇಬ್ಬರೂ ವಾದ ಮಾಡಿಕೊಂಡಿದ್ದಾರೆ.
ಬಳಿಕ ನೀನು ಫೇಕ್ ಜಿಎಸ್ಟಿ ಇನ್ಸ್ಪೆಕ್ಟರ್ ಎಂದು ಇನ್ಸ್ಪೆಕ್ಟರ್ ವಿನಯ್ಗೆ ಪಬ್ ಮಾಲಿಕ ರಾಕೇಶ್ ಬೈದಿದ್ದಾನೆ. ಅದಾಗುತ್ತಿದ್ದಂತೆ ಇನ್ಸ್ಪೆಕ್ಟರ್ ವಿನಯ್ನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ. ಬೆಳಗಿನ ಜಾವ ಮೂರು ಗಂಟೆಯ ತನಕ ಹಲ್ಲೆ ಮಾಡಿರುವ ಅರೋಪ ಕೇಳಿಬಂದಿದೆ. ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.
Discussion about this post