ಚಾಮರಾಜನಗರ: ಕೆಎಸ್ಆರ್ಟಿಸಿ-ಟಿಪ್ಪರ್ ನಡುವೆ ಭೀಕರವಾಗಿ ಮುಖಾಮುಖಿ ಡಿಕ್ಕಿಯಾದ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.
ಒಂದು ಟಿಪ್ಪರ್ ಇನ್ನೊಂದು ಟಿಪ್ಪರ್ ಟೇಕ್ ಓವರ್ ಮಾಡಲು ಹೋಗಿ ಯಡವಟ್ಟಾಗಿದೆ.
ನಿನ್ನೆ ಬೆಳ್ಳಗೆ 10 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಟಿಪ್ಪರ್ ಬಂದು ಗುದ್ದಿದ ರಭಸಕ್ಕೆ ಕೆ.ಎಸ್.ಆರ್.ಟಿ.ಸಿ ಪಕ್ಕದಲ್ಲೇ ಇದ್ದ ಹಳ್ಳಕ್ಕೆ ನುಗ್ಗಿದೆ.
ಈ ಘಟನೆಯಲ್ಲಿ ಬಸ್ ಚಾಲಕ ಶ್ಯಾಮ್ ಸೇರಿ ಏಳು ಮಂದಿಗೆ ಗಾಯವಾಗಿದೆ. ಗಾಯಗೊಂಡವರನ್ನ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದೆ ಎನ್ನಲಾಗಿದೆ. ಇನ್ನು ಅಪಘಾತದ ದೃಶ್ಯ ಗುಂಡ್ಲುಪೇಟೆಯ ಶೆಲ್ ಪೆಟ್ರೋಲ್ ಬಂಕ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Discussion about this post