ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ರಾಜಸ್ಥಾನದ ಬರ್ವಾರದಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ನಲ್ಲಿ ಸಂಜೆ 3.30 ರಿಂದ 3.45ರ ವೇಳೆಯಲ್ಲಿ ವಿವಾಹವಾಗಲಿದ್ದಾರೆ. ಇಂದು ನಡೆಯಲಿರುವ ವಿವಾಹ ಕಾರ್ಯಕ್ರಮವನ್ನು, ಓಟಿಟಿಯಲ್ಲಿ ಪ್ರಸಾರ ಮಾಡಲು ಒಪ್ಪಿಗೆ ಕೊಡುವಂತೆ ಕತ್ರಿನಾ ಹಾಗೂ ವಿಕ್ಕಿ ಜೊತೆಗೆ ಅಮೆಜಾನ್ ಪ್ರೈಮ್ 80 ಕೋಟಿ ರೂಪಾಯಿಗೆ ಡೀಲ್ ಮಾಡಿಕೊಂಡಿದೆ ಎನ್ನಲಾಗ್ತಿದೆ.
ಇನ್ನು, ಡಿಸೆಂಬರ್ 7ರಿಂದ ನಿನ್ನೆಯವರೆಗೆ ಸಿಕ್ಸ್ ಸೆನ್ಸಸ್ ಫೋರ್ಟ್ನಲ್ಲಿ ಪ್ರಿವೆಡ್ಡಿಂಗ್ ಫಂಕ್ಷನ್ ನಡೆದಿದೆ, ಈ ಪಾರ್ಟಿಯಲ್ಲಿ ತಮ್ಮ ಆಪ್ತಬಳಗಕ್ಕೆ ಮಾತ್ರ ಕತ್ರಿನಾ ಹಾಗೂ ವಿಕ್ಕಿ ಆಹ್ವಾನ ನೀಡಿದ್ದರು.
Discussion about this post