ಎಸ್.ಎಸ್. ರಾಜಮೌಳಿ (SS Rajamouli) ಸಿನಿಮಾ ಮಾಡೋಕೆ ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೇ ಪ್ರಾಮುಖ್ಯತೆಯನ್ನು ಸಿನಿಮಾದ ಪ್ರಚಾರಕ್ಕೂ ಕೊಡುತ್ತಾರೆ. ದೊಡ್ಡ ಬಜೆಟ್ನಲ್ಲಿ ಸಿದ್ಧಗೊಳ್ಳುವ ಅವರ ನಿರ್ದೇಶನದ ಸಿನಿಮಾಗಳಿಗೆ ಭಾರೀ ಪ್ರಚಾರ ನೀಡುತ್ತಾರೆ. ಈ ಮೂಲಕ ಸಿನಿಮಾವನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತಾರೆ. ಈಗ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Movie) ಸಿನಿಮಾ ರಿಲೀಸ್ಗೆ ರೆಡಿ ಆಗಿದೆ. ಹೊಸ ವರ್ಷದ ಆರಂಭದಲ್ಲೇ ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕಲೆಕ್ಷನ್ ರೂಪದಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಲು ರಾಜಮೌಳಿ ರೆಡಿ ಆಗಿದ್ದಾರೆ. ಇದಕ್ಕೆ ಸಿದ್ಧರಾಗುವಂತೆ ತಂಡದ ಕಲಾವಿದರಿಗೆ ಅವರು ಸೂಚಿಸಿದ್ದಾರೆ.
ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಕಾರಣಕ್ಕೆ ಉಳಿದ ಎಲ್ಲಾ ಪ್ರಾಜೆಕ್ಟ್ಗಳ ಕೆಲಸವನ್ನು ಮುಂದೂಡುವಂತೆ ಅವರು ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಚಾರದ ಮಧ್ಯೆಯೂ ಅವರು ಉಳಿದ ಪ್ರಾಜೆಕ್ಟ್ಗಳ ಕೆಲಸಗಳನ್ನು ಮುಂದುವರಿಸಬಹುದು. ಆದರೆ, ಇದರಿಂದ ಅವರ ಆರೋಗ್ಯದ ಮೇಲೆ ಬೇರೆಯದೇ ರೀತಿಯ ಪರಿಣಾಮ ಉಂಟಾಗಬಹುದು.
ಜ್ಯೂ.ಎನ್ಟಿಆರ್ ಇತ್ತೀಚೆಗೆ ಸಣ್ಣ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಅವರು ಕೊಂಚ ವಿಶ್ರಾಂತಿ ಪಡೆಯಬೇಕಿದೆ. ವಿಶ್ರಾಂತಿ ನಂತರದಲ್ಲಿ ‘ಆರ್ಆರ್ಆರ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಲಿದ್ದಾರೆ. ಈ ನಡುವೆ ಬೇರೆ ಸಿನಿಮಾಗಳ ಕೆಲಸ ಮಾಡೋದು ಎಂದರೆ ಅದು ತುಂಬಾನೇ ಶ್ರಮದಾಯಕವಾಗಲಿದೆ. ಈ ಕಾರಣಕ್ಕೆ ಜ್ಯೂ.ಎನ್ಟಿಆರ್ ಅವರು ಉಳಿದ ಪ್ರಾಜೆಕ್ಟ್ಗಳ ಕೆಲಸವನ್ನು 2022ಕ್ಕೆ ಮುಂದೂಡಿದ್ದಾರೆ.
ಜ್ಯೂ.ಎನ್ಟಿಆರ್ ಅವರು ಜಾಹೀರಾತು ಶೂಟಿಂಗ್ಗಾಗಿ ಮುಂಬೈಗೆ ತೆರಳಬೇಕಿತ್ತು. ಆದರೆ, ಆ ಕೆಲಸವನ್ನು ಸದ್ಯಕ್ಕೆ ಹೋಲ್ಡ್ನಲ್ಲಿ ಇರಿಸಿದ್ದಾರೆ. ಇನ್ನು, ಕೊರಟಾಲ ಶಿವ ಜತೆ ಜ್ಯೂ.ಎನ್ಟಿಆರ್ ಸಿನಿಮಾ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲಿ ಈ ಸಿನಿಮಾ ಮುಹೂರ್ತ ನಡೆಯಬೇಕಿತ್ತು. ಅದನ್ನು ಕೂಡ ಜ್ಯೂ.ಎನ್ಟಿಆರ್ 2021ಕ್ಕೆ ಪೋಸ್ಟ್ಪೋನ್ ಮಾಡಿದ್ದಾರೆ.
ನೈಜ ಘಟನೆ ಆಧರಿಸಿ ‘ಆರ್ಆರ್ಆರ್’ ಸಿನಿಮಾ ತಯಾರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಿಂದೆ ‘ದೋಸ್ತಿ..’ ಹಾಡು ಬಿಡುಗಡೆ ಆಗಿತ್ತು. ಇತ್ತೀಚೆಗೆ ರಿಲೀಸ್ ಆದ ಎರಡನೇ ಗೀತೆ ‘ಹಳ್ಳಿ ನಾಟು..’ ಎಲ್ಲೆಲ್ಲೂ ರಾರಾಜಿಸುತ್ತಿದೆ. ಈ ಹಾಡಿನಿಂದಾಗಿ ಚಿತ್ರದ ಮೇಲಿನ ಕ್ರೇಜ್ ಹೆಚ್ಚುವಂತಾಗಿದೆ. 2022ರ ಜ.7ರಂದು ಈ ಸಿನಿಮಾ ಅದ್ದೂರಿಯಾಗಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆ ದಿನಕ್ಕಾಗಿ ಸಿನಿಪ್ರಿಯರು ಕಾದು ಕುಳಿತಿದ್ದಾರೆ.
Discussion about this post