ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತವರ ಪತ್ನಿ ಮಧುಲಿಕಾ ಸೇರಿದಂತೆ ಸೇನಾ ಸಿಬ್ಬಂದಿಯಿದ್ದ ಎಮ್‌ಐ-ಸಿರೀಸ್ ಹೆಲಿಕಾಪ್ಟರ್ ತಮಿಳುನಾಡಿನ ಸುಲೂರ್ ಮತ್ತು ಕೊಯಮತ್ತೂರ್ ನಡುವಿನ ನೀಲಗಿರಿ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿತ್ತು. ಬಳಿಕ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವನ್ನಪ್ಪಿರುವುದಾಗಿ ಸೇನೆ ಮೂಲಗಳು ತಿಳಿಸಿದವು.
ಹೆಲಿಕಾಪ್ಟರ್ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸಿದ್ದರು. ಈ ಪೈಕಿ 13 ಮಂದಿ ಸಾವನ್ನಪ್ಪಿದ್ದು, ಈಗ ಒಬ್ಬ ಸೇನಾಧಿಕಾರಿ ಮಾತ್ರ ಬದುಕುಳಿದಿದ್ದಾರೆ ಎನ್ನಲಾಗಿದೆ. ಭಾರತೀಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಈಗ ಉಸಿರಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದಾರೆ.
ಇನ್ನು, ವರುಣ್ ಸಿಂಗ್ ಭಾರತೀಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್. ಇವರು 2020ರಲ್ಲಿ ತುರ್ತು ಸಂದರ್ಭವೊಂದರಲ್ಲಿ ಎನ್ಸಿಎ ತೇಜಸ್ ಫೈಟರ್ ಅನ್ನು ರಕ್ಷಿಸಿದ್ದರು. ಇದಕ್ಕಾಗಿ ಈ ವರ್ಷದ ಸ್ವಾತಂತ್ರ್ಯ ದಿನದಂದು ಶೌರ್ಯಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು
Discussion about this post