ಆರೋಪಿಗಳು ನಿಷೇಧಿತ ಒಂದು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಕಾಪಿ ಮಾಡಿ ವಂಚನೆ ಮಾಡುತ್ತಿದ್ದರು. ನಾವು ಹಳೆ ನೋಟು ಕೊಡ್ತೀವಿ ನಮಗೆ ಕಡಿಮೆ ಆದ್ರು ಪರವಾಗಿಲ್ಲಾ ಹೊಸ ನೋಟು ಕೊಡಿ ಎಂದು ಬಲೆ ಬೀಸ್ತಿದ್ರು ಎನ್ನಲಾಗಿದೆ. ಯಾರು ಹಳೆ ನೋಟು ಪಡೆದು ಹೊಸ ನೋಟು ಕೊಡ್ತಿನಿ ಅಂತ ಇರ್ತಾರೆ ಅಂತೋರನ್ನೇ ಹುಡುಕಿ ವಂಚಿಸುತ್ತಿದ್ದರಂತೆ.
ಆರೋಪಿಗಳು ಮೊದಲಿಗೆ 35 ಲಕ್ಷ ನಿಷೇಧಿತ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ದಾಳಿ ವೇಳೆ 1 ಸಾವಿರ ಹಾಗೂ 500 ಮುಖಬೆಲೆಯ 70 ಲಕ್ಷ ನಿಷೇಧಿತ ಅಸಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳ ಪಡಿಸಿದಾಗ ಕಾಸರಗೋಡಿನಲ್ಲಿ ಬಾಕಿ ಹಣ ಇದೆ ಎಂದು ಹೇಳಿದ್ದಾರಂತೆ. ಆ ಪ್ರಕಾರ ಕಾಸರಗೂಡಿಗೆ ಹೋದಾಗ 6 ಕೋಟಿ ಝೆರಾಕ್ಸ್ ನೋಟುಗಳ ಜೊತೆಗೆ ಝೆರಾಕ್ಸ್ಗೆ ಬಳಸುತ್ತಿದ್ದ 16 ಮೂಟೆ ಪೇಪರ್ ಪತ್ತೆಯಾಗಿದೆ ಎಂದು ನ್ಯೂಸ್ಫಸ್ಟ್ಗೆ ಮಾಹಿತಿ ಲಭ್ಯವಾಗಿದೆ.
ಬಟ್ಟೆ ವ್ಯಾಪಾರಿಗಳಾದ ಸುರೇಶ್ ಕುಮಾರ್, ರಾಮಕೃಷ್ಣ, ರೈತ ಮಂಜುನಾಥ್, ಬಿಬಿಎಂಪಿ ಸಬ್ ಕಾಂಟ್ರಾಕ್ಟರ್ ವೆಂಕಟೇಶ್. ದಯಾನಂದ್, ಶಿವ ಮತ್ತು ಪಳನಿಸ್ವಾಮಿ ಎಂಬಾತರನ್ನು ಬಂಧನ ಮಾಡಲಾಗಿದ್ದು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :
ಕೆಆರ್ಎಸ್ ಒಡಲು ತುಂಬಲು 1 ಅಡಿ ಬಾಕಿ..ರೈತರ ಮೊಗದಲ್ಲಿ ಮೂಡಿದ ಮಂದಹಾಸ
Discussion about this post