ಇದೊಂದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಂತೋಷದ ವಿಚಾರ. ವಿಕ್ರಾಂತ್ ರೋಣ ಮಾಡ್ತಿದೆ ಭರ್ಜರಿ ಪ್ರಚಾರ. ಅದೇನಪ್ಪ ಅಂತಹ ಸಮಚಾರ ಅಂದ್ರೆ ಎಲ್ಲಿ ಎಸ್.ಎಸ್.ರಾಜಮೌಳಿ ಅವರ ರೌದ್ರ ರಣ ರುಧಿರ ಅರ್ಥಾತ್ ಥ್ರಿಬಲ್ ಆರ್ ಸಿನಿಮಾ ಎಲ್ಲಿ ಕಾಣುತ್ತೋ ಅಲ್ಲಿ ಇರುತ್ತೆ ವಿಕ್ರಾಂತ್ ರೋಣ.
ರೌದ್ರ ರಣ ರುಧಿರ. ಥ್ರಿಬಲ್ ಆರ್. ರಾಜಮೌಳಿ ಈ ಬಾರಿ ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಅವರನ್ನ ಸೇರ್ಸ್ಕೊಂಡು ಬಾಹುಬಲಿಗಿಂತ ಹೆಚ್ಚಿನದ್ದು ಏನೋ ಮಾಡಿದ್ದಾರೆ ಅನ್ನೋ ಅಂದದ ಅಂದಾಜಿನಲ್ಲಿದ್ದಾರೆ ಯೂನಿವರ್ಸಲ್ ಚಿತ್ರಪ್ರೇಮಿಗಳು. ಎಲ್ಲರ ನಿರೀಕ್ಷೆಗೆ ಪೂರಕವಾಗಿ ಥ್ರಿಬಲ್ ಆರ್ ಬಳಗದಿಂದ ಬಂದಿರೋ ಎಲ್ಲಾ ಕಂಟೆಂಟ್ ಕುತೂಹಲದ ಕೋಟೆಯನ್ನ ಪ್ರೇಕ್ಷಕರ ಮನಸಿನ ಅಂಗಳದಲ್ಲಿ ಕಟ್ಟಿವೆ.
ಇಂತಹ ಥ್ರಿಬಲ್ ಆರ್ ಬರುತ್ತಿರೋ ಬೆಳ್ಳಿ ಸ್ಕ್ರೀನ್ಗಳಲ್ಲಿ ನಮ್ಮ ಕನ್ನಡದ ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕಾಣಲಿದೆ. ಅರೇ ಅದ್ಹೆಂಗೆ ಅನ್ನೋರಿಗೆ ನಮ್ಮಲಿ ಸಿಹಿ ಸಹಿ ಉತ್ತರವಿದೆ.
RRR ಕಂಡಲ್ಲಿ ವಿಕ್ರಾಂತ್ ರೋಣನ ಮಿಂಚು
ಬಿಗ್ ಪ್ರಮೋಷನ್ಗೆ ವಿಕ್ರಾಂತ್ ರೋಣ ಸಂಚು
ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯ ಸಿನಿಮಾ. ವಿಕ್ರಾಂತ್ ರೋಣನ ಗತ್ತು ಗಮ್ಮತ್ತೇನು ಅನ್ನೋದನ್ನ ಈಗಾಗಲೇ ನಾವು ನೀವು ಬುರ್ಜ್ ಖಲೀಫಾ ಬಿಲ್ಡಿಂಗ್ ಮೇಲೆ ನೋಡಿಯಾಗಿದೆ. ದೊಡ್ಡ ಮಟ್ಟದ ಗುರಿಯನ್ನ ವಿಕ್ರಾಂತ್ ರೋಣ ಟೀಮ್ ಹಾಕಿಕೊಂಡಿದೆ. ಈ ವಿಚಾರವಾಗಿ ದೊಡ್ಡ ಮಟ್ಟದ ಪ್ರಮೋಷನಲ್ ಪ್ಲಾನ್ ಅನ್ನೇ ಹಾಕಿಕೊಂಡಿರುವ ನಿರ್ಮಾಪಕ ಜಾಕ್ ಮಂಜುನಾಥ್ ಒಂದೊಳ್ಳೆ ಪ್ಲಾನ್ ಮಾಡಿದ್ದಾರೆ.
ಫೆಬ್ರವರಿ 26ನೇ ತಾರೀಖ್ ಕೆ.ವಿ.ಎನ್ ಪ್ರೊಡಕ್ಷನ್ ವತಿಯಿಂದ ಸಮಸ್ತ ಸಿನಿಮಾ ಪ್ರೇಮಿಗಳಿಗೆ ವಿಕ್ರಾಂತ್ ರೋಣ ಸಿನಿಮಾದ ದರ್ಶನವಾಗುತ್ತಿದೆ. ಶೀಘ್ರದಲ್ಲೇ ಪ್ರಮೋಷನಲ್ ಆಯಕ್ಟಿವಿಟಿಗೆ ಚಾಲನೆ ಕೊಡಲು ಸಜ್ಜಾಗಿರುವ ವಿಕ್ರಾಂತ್ ರೋಣ ಟೀಮ್ ಒಂದು ಸೂಪರ್ ಪ್ಲಾನ್ನಲ್ಲಿದೆ.
ಜನವರಿ 7ನೇ ತಾರೀಖ್ ವಿಶ್ವಾದ್ಯಂತ ರಾಜಮೌಳಿ ನಿರ್ದೇಶನದ ಥ್ರಿಬಲ್ ಆರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ದಿನದಂದು ಥ್ರಿಬಲ್ ಆರ್ ತೆರೆಕಾಣುವ ಸ್ಕ್ರೀನ್ಗಳಲ್ಲಿ ವಿಕ್ರಾಂತ್ ರೋಣ ಚಿತ್ರದ ಟೀಸರ್ ಝಲಕ್ ಪ್ರದರ್ಶನ ಕಾಣಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಫಿಲ್ಮ್ ಟೀಮ್ನಿಂದ ಅಧಿಕೃತ ಮಾಹಿತಿ ಹೊರ ಬರೋ ಸಾಧ್ಯತೆ ಇದೆ.
Discussion about this post