ಜೇಮ್ಸ್.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೀರೋ ಆಗಿ ಅಭಿನಯಿಸಿದ ಕೊನೆಯ ಚಿತ್ರ. ಅಪ್ಪು ಅಗಲಿಕೆಯ ನಂತ್ರ ‘ದೊಡ್ಮನೆ ಅಭಿಮಾನಿಗಳು ‘ಜೇಮ್ಸ್’ಗಾಗಿ ನಿದ್ದೆ ಬಿಟ್ಟು ಕಾಯ್ತಿದ್ದಾರೆ. ಅಲ್ಲದೆ ‘ಜೇಮ್ಸ್’ ಚಿತ್ರವನ್ನು ಅಪ್ಪು ಬರ್ತ್ಡೇ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡ್ತಿದೆ.ಯಾಕಂದ್ರೆ ‘ಜೇಮ್ಸ್’ ಚಿತ್ರವನ್ನು ಮಾರ್ಚ್ 17ಕ್ಕೆ ರಿಲೀಸ್ ಮಾಡುವ ಮೂಲಕ ಪವರ್ ಸ್ಟಾರ್ ಕನಸ್ಸೊಂದನ್ನು ನೆರವೇರಿಸಲು ‘ಜೇಮ್ಸ್’ ಸಿನಿ ಪಡೆ ಸಜ್ಜಾಗಿದೆ.
ಅಲ್ಲದೆ ಮಾರ್ಚ್ 17 ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬದಂದು ‘ಜೇಮ್ಸ್’ ಉತ್ಸವ ಮಾಡಲು ದೊಡ್ಮನೆ ಅಭಿಮಾನಿಗಳು ಪಣತೊಟ್ಟಿದ್ದಾರೆ.
ದೊಡ್ಮನೆಯ ರಾಜಕುಮಾರ ಪುನೀತ್ ರಾಜ್ ಕುಮಾರ್ ನಮ್ಮನಗಲಿ 45 ದಿಗಳು ಕಳೆದಿವೆ. ಅದ್ರೆ ಅವರ ನೆನಪು, ಅವರ ಮಗುವಿನಂತ ನಗು ಮಾತ್ರ ಅಪ್ಪು ಅವರನ್ನು ಅರಾಧಿಸುವ ಹೃದಯಗಳಲ್ಲಿ ಇನ್ನು ಜೀವಂತವಾಗಿದೆ. ಅಪ್ಪು ನಮ್ಮ ಜೊತೆ ಇಲ್ಲದಿದ್ರೆ ಏನು ಅವರ ಕನಸುಗಳು ಅವರ ಸಾರ್ಥಕ ಬದುಕು ಅವರ ಅಭಿಮಾನಿಗಳು ಹೆಮ್ಮೆಯಿಂದ ಜೀವಿಸುವಂತೆ ಮಾಡಿದೆ.
ಅಪ್ಪು ಅಕಾಲಿಕ ಮರಣದ ನಂತ್ರ ಅವರ ಅಭಿಮಾನಿಗಳು ರಾಮನಿಗಾಗಿ ಶಬರಿ ಕಾದಂತೆ ಪುನೀತ್ ಅಭಿನಯದ ‘ಜೇಮ್ಸ್’ ಚಿತ್ರಕ್ಕಾಗಿ ಕಾಯ್ತಿದ್ದಾರೆ. ಅದ್ರೆ ಕೆಲವರು ಜೇಮ್ಸ್ ಚಿತ್ರ ಶೂಟಿಂಗ್ ಮುಗಿದಿಲ್ಲ, ಅಗಂತೆ ಈಗಂತೆ ಅಂತ ಊಹಪೋಹದ ಸುದ್ದಿಗಳನ್ನು ಹರಿಬಿಡುವ ಪ್ರಯತ್ನ ಮಾಡಿದ್ರು. ಅದ್ರೆ ಇದಕ್ಕೆ ಕ್ಯಾರೆ ಅನ್ನದ ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಚಿತ್ರದ ಶೂಟಿಂಗ್ ಮುಗಿಸಿ, ಅಪ್ಪು ಅವರ ಬಹು ದಿನದ ಆಸೆಯೊಂದನ್ನ ಇಡೇರಿಸೋಕೆ ಸಜ್ಜಾಗಿದ್ದಾರೆ.
ಯೆಸ್..ಜೇಮ್ಸ್ ಚಿತ್ರದ ಟಾಕಿ ಪೋಶನ್ ಅಪ್ಪು ಇದ್ದಾಗಲೇ ಮುಗಿದಿದೆ. ಅದ್ರೆ ಚಿತ್ರದ ಡ್ಯುಯೆಟ್ ಸಾಂಗ್ ಬಾಕಿ ಇದ್ದು ಇದಕ್ಕೆ ತಲೆ ಕೆಡಿಸಿಕೊಳ್ಳದ ಚೇತನ್ ಅಪ್ಪು ಆಸೆಯಂತೆ ಜೇಮ್ಸ್ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಹುಟ್ಟಿದ ಶುಭದಿನದಂದೆ ಅಭಿಮಾನಿಗಳಿಗೆ ಅರ್ಪಿಸಲು ಸಜ್ಜಾಗಿದ್ದಾರೆ. ನೋವಿನ ವಿಚಾರ ಅಂದ್ರೆ ಇದುವರೆಗೂ ಅಪ್ಪು ಅಭಿನಯದ ಯಾವ ಚಿತ್ರ ಕೂಡ ಅವರ ಹುಟ್ಟು ಹಬ್ಬದಂದು ರಿಲೀಸ್ ಆಗಿಲ್ಲ. ಆದ್ರೆ ಈಗ ಅಪ್ಪು ಇಲ್ಲದ ವೇಳೆ ಅವರ ಹುಟ್ಟು ಹಬ್ಬದಂದು ಜೇಮ್ಸ್ ಚಿತ್ರ ರಿಲೀಸ್ ಆಗ್ತಿದೆ.
ವಿಶೇಷ ಅಂದ್ರೆ ಜೇಮ್ಸ್ ಚಿತ್ರವನ್ನು ಮಾರ್ಚ್ 17 ರಿಲೀಸ್ ಮಾಡುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೆ ನಿರ್ದೇಶಕ ಚೇತನ್ಗೆ ಹೇಳಿದ್ರಂತೆ. ಅಲ್ಲದೆ ಮಾರ್ಚ್ 17 ಗುರುವಾರ ಬಿದ್ದಿದೆ ಅಲ್ಲದೆ ನನ್ನ ಹುಟ್ಟು ಹಬ್ಬದ ದಿನ ಯಾವ ಸಿನಿಮಾ ರಿಲೀಸ್ ಆಗಿಲ್ಲ ಅಂತ ಅಪ್ಪುನೇ ಹೇಳಿದ್ರಂತೆ. ಅದರಂತೆ ಈಗ ಅಪ್ಪು ಅವರ ಬಹು ದಿನಗಳ ಆಸೆಯನ್ನು ಈಡೇರಿಸೋಕೆ ನಿರ್ದೇಶಕ ಚೇತನ್ ಮನಸ್ಸು ಮಾಡಿದ್ದು ಜೇಮ್ಸ್ ಚಿತ್ರವನ್ನು ಅಪ್ಪು ಹುಟ್ಟು ಹಬ್ಬದಂದು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.
ಸದ್ಯ ಜೇಮ್ಸ್ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿಯಾಗಿದ್ದು, ಜನವರಿಯಿಂದ ಅಬ್ಬರ ಪ್ರಚಾರ ಮಾಡುವ ಮೂಲಕ ಜೇಮ್ಸ್ ಸಿನಿಮಾವನ್ನು ರಿಲಿಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಗುರುವಾರ ರಿಲೀಸ್ ಆಗಿರುವ ಪುನೀತ್ ಬಹುತೇಕ ಸಿನಿಮಾಗಳು ಸಕ್ಸಸ್ ಆಗಿದ್ದು, ಈಗ ಅಪ್ಪು ಆಸೆಯಂತೆ ಗುರುವಾರ ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದ್ದು, ನಾಡ ಹಬ್ಬದಂತೆ ಸಂಭ್ರಮಿಸಿ ಜೇಮ್ಸ್ ನ ಸ್ವಾಗತಿಸಲು ದೊಡ್ಮನೆ ಅಭಿಮಾನಿಗಳು ಈಗಾಗಲೇ ತಯಾರಿ ಮಾಡ್ಕೊತಿದ್ದಾರೆ.
Discussion about this post