ನವದೆಹಲಿ: ಪೂರ್ವ ದೆಹಲಿಯ ಓಲ್ಡ್ ಸೀಮಾಪುರಿ ಪ್ರದೇಶದಲ್ಲಿನ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಹೋರಿಲಾಲ್ (59), ಅವರ ಪತ್ನಿ ರೀನಾ (55), ಪುತ್ರ ಅಶು (24) ಮತ್ತು ಪುತ್ರಿ ರೋಹಿಣಿ (18) ಎಂದು ಗುರುತಿಸಲಾಗಿದೆ.
ಹೋರಿಲಾಲ್-ರೀನಾ ದಂಪತಿಯ ಮತ್ತೊಬ್ಬ ಪುತ್ರ ಅಕ್ಷಯ್(22) ಎರಡನೇ ಮಹಡಿಯಲ್ಲಿ ಮಲಗಿದ್ದ ಕಾರಣ ಈ ಅವಘಡದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.
ಬೆಂಕಿ ಅವಘಡದ ವಿಷಯ ತಿಳಿದ ತಕ್ಷಣ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ.
ಇದನ್ನೂ ಓದಿ :
Discussion about this post