ಇಂಡಿಯಾದಲ್ಲಿ ಕ್ರಿಕೆಟ್ ಒಂದು ಕ್ರೀಡೆ ಮಾತ್ರ ಅಲ್ಲ.. ಕ್ರಿಕೆಟ್ ಅನ್ನು ಒಂದು ಧರ್ಮದಂತೆ ಭಾವಿಸ್ತಾರೆ.. ಜೊತೆಗೆ ಭಾರತೀಯರು ಕ್ರಿಕೆಟ್ ಜೊತೆ ಜೀವಿಸ್ತಾರತೆ..ಇನ್ನು ಕ್ರಿಕೆಟ್ ಮೂಲಕ ಭಾರತೀಯರ ಮನ ಗೆದ್ದಿರುವ ಆಟಗಾರರ ಬದುಕು ಸಿನಿಮಾ ಅದ್ರೆ ಕೇಳ ಬೇಕಾ..ಹಬ್ಬದಂತೆ ಆ ಸಿನಿಮಾವನ್ನು ಸೆಲೆಬ್ರೇಟ್ ಮಾಡ್ತಾರೆ..
ಸದ್ಯ ಬಾಲಿವುಡ್ನಲ್ಲಿ ಸಿದ್ಧವಾಗಿರೋ ’83’ ಸಿನಿಮಾ ರಿಲೀಸ್ಗೆ ಕೌಂಟ್ ಡೌನ್ ಫಿಕ್ಸ್ ಆಗಿದೆ.. 5 ಭಾಷೆಗಳಲ್ಲಿ ಬರ್ತಿರುವ ಈ ಚಿತ್ರಕ್ಕೆ ಕನ್ನಡದಲ್ಲಿ ಕಿಚ್ಚಾ ಸುದೀಪ್ ಕನ್ನಡದಲ್ಲಿ ಸಾಥ್ ನೀಡಿದ್ದಾರೆ. ಅದೇ ರೀತಿ ಈಗ ತೆಲುಗು ನಾಡಲ್ಲಿ ’83’ ಸಿನಿಮಾ ಜೊತೆ ಅಕ್ಕಿನೇನಿ ಕುಟುಂಬ ನಿಂತಿದೆ.
ಬಾಲಿವುಡ್ನ ವಿಶೇಷ ಪಾತ್ರಗಳಿಂದ ಗಮನ ಸೆಳೆದಿರುವ ರಣ್ವೀರ್ ಸಿಂಗ್, ಬಿಟೌನ್ನ ಬಾಕ್ಸಾಫೀಸ್ ಪದ್ಮಾವತಿ ದೀಪಿಕಾ ಪಡುಕೋಣೆ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಮೂವಿ ’83’.. ಈಗಾಗಲೇ ಸಾಕಷ್ಟು ಕ್ರಿಕೆಟ್ ತಾರೆಯರ ಜೀವನಗಾಥೆಗಳು ಪ್ರೇಕ್ಷಕರ ಮುಂದೆ ಬಂದು ಹೋಗಿವೆ. ಆದರೆ ಭಾರತಕ್ಕೆ ಚೊಚ್ಚಲ ವರ್ಲ್ಡ್ಕಪ್ ತಂದುಕೊಟ್ಟಂಥ ಕ್ಯಾಪ್ಟನ್ ಕಪೀಲ್ ದೇವ್ ಅವರ ಜೀವನ ಚರಿತ್ರೆ ಬಂದಿರಲಿಲ್ಲ. ಎರಡು ವರ್ಷದ ಹಿಂದೆ ಶುರುವಾದ ‘1983’ ರ ವರ್ಲ್ಡ್ಕಪ್ ಕಥೆ ಈಗ ಬಿಡುಗಡೆಗೆ ಸಿದ್ಧವಾಗಿದೆ.
ಪೋಸ್ಟರ್, ಟೀಸರ್ ಬಿಟ್ಟು ಕುತೂಹಲ ಕೆರಳಿಸಿದ್ಧ ’83’ ಸಿನಿಮಾ ಭರ್ಜರಿ ಟ್ರೈಲರ್ ಮೂಲಕ ಕೋಟಿ ಕೋಟಿ ಭಾರತೀಯರ ನಿರೀಕ್ಷೆಯನ್ನು ನೋರುಪಟ್ಟು ಜಾಸ್ತಿ ಮಾಡಿದೆ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ , ಭಾರತಾಂಬೆಯ ಮಡಿಲಿಗೆ ಮೊದಲ ವಿಶ್ವಕಪ್ ತಂದು ಕೊಟ್ಟ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿದ್ದಾರೆ.. ಅಲ್ಲದೆ ಚಿತ್ರದಲ್ಲಿ ರನವೀರ್ಗೆ ನಾಯಕಿಯಾಗಿ ಕನ್ನಡತಿ ದೀಪಿಕಾ ಪಡುಕೋಣೆ ನಟಿಸಿದ್ದು, ಚಿತ್ರದಲ್ಲಿ ಬಹುಭಾಷ ಕಲಾವಿದರ ದಂಡೇ ಬಣ್ಣ ಹಚ್ಚಿದ್ದಾರೆ.
ಇಡೀ ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್ ರಂಗ ಎದುರು ನೋಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ’83’ ಡಿ.24ರಂದು ಬಿಡುಗಡೆ ಆಗಲು ಸಜ್ಜಾಗಿದೆ. 1983ರಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಜಯಗಳಿಸಿದ ಕಥೆಯನ್ನು ಹೇಳಲಿದೆ ’83’ . ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ’83’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು , ಕನ್ನಡದಲ್ಲಿ ಬರ್ತಿರುವ 83 ಚಿತ್ರವನ್ನು ಸ್ಯಾಂಡಲ್ವುಡ್ನ ಬಾದ್ ಷಾ ‘ಕಿಚ್ಚ’ ಸುದೀಪ್ ಅವರು ಅರ್ಪಿಸುತ್ತಿದ್ದಾರೆ. ಅದೇ ರೀತಿ ಟಾಲಿವುಡ್ನಲ್ಲಿ 83 ಚಿತ್ರಕ್ಕೆ ಅಕ್ಕಿನೇನಿ ಕುಟುಂಬ ಸಾಥ್ ನೀಡುತ್ತಿದೆ.
Thank you all !!! 😇❤️🧿🙏🏽 pic.twitter.com/DTNOpKp3DN
— Ranveer Singh (@RanveerOfficial) December 1, 2021
’83’ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗುತ್ತಿದ್ದು, ಟಾಲಿವುಡ್ನಲ್ಲಿ ಅಕ್ಕಿನೇನಿ ಕುಟುಂಬ ಎರಡು ಜವಾಬ್ದಾರಿಗಳನ್ನು ಹೊತ್ತುಕೊಂಡಿದೆ. ಅದೇನಪ್ಪ ಅಂದ್ರೆ ಟಾಲಿವುಡ್ನಲ್ಲಿ ’83’ ಸಿನಿಮಾವನ್ನು ವಿತರಣೆ ಮಾಡುವುದರ ಜೊತೆಗೆ, 83 ಸಿನಿಮಾದಲ್ಲಿ ಕಪಿಲ್ದೇವ್ ಪಾತ್ರ ಮಾಡುತ್ತಿರುವ ರಣವೀರ್ ಸಿಂಗ್ಗೆ ತೆಲುಗಿನಲ್ಲಿ ಅಕ್ಕಿನೇನಿ ಕುಟುಂಬದ ಕುಡಿ ಸುಮಂತ್ ಡಬ್ಬಿಂಗ್ ಮಾಡಿದ್ದಾರೆ.
The incredible true story of the underdogs who pulled off the unthinkable!#83Trailer in Telugu Out Now: https://t.co/HGt91Xy43r 🔥
83 RELEASING IN CINEMAS ON 24TH DEC, 2021, in Hindi, Tamil, Telugu, Kannada and Malayalam. Also in 3D.#ThisIs83@kabirkhankk @RanveerOfficial
— Nagarjuna Akkineni (@iamnagarjuna) November 30, 2021
Discussion about this post