ಮಂಡ್ಯ: ದೇಶದಲ್ಲಿ ಒಂದು ಕಡೆ ಒಮಿಕ್ರಾನ್ ಆತಂಕ ಎದುರಾಗುತ್ತಿದ್ದರೇ ಮತ್ತೊಂದೆಡೆ ಕೊರೊನಾತಂಕವೂ ಹೆಚ್ಚಾಗುತ್ತಿದೆ. ಮಂಡ್ಯ ಮಿಮ್ಸ್‌ನಲ್ಲಿ ಟ್ರೈನಿಗಳಾಗಿ ಕೆಲಸ ನಿರ್ವಹಿಸುತ್ತಿದ್ದವ 9 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ.
ಸೋಂಕಿತರೆಲ್ಲರೂ ಕೇರಳದಿಂದ ಬಂದಿದ್ದ ವಿದ್ಯಾರ್ಥಿನಿಯರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರನ್ನು ಮಹಿಳಾ ಹಾಸ್ಟೆಲ್‌ನಲ್ಲಿ ಕ್ವಾರಂಟೀನ್ ಮಾಡಲಾಗಿದೆ.
ವಿದ್ಯಾರ್ಥಿಗಳು ಡಿ.8 ರಂದು ಕೇರಳಕ್ಕೆ ತೆರಳಿ ಡಿ.14 ರಂದು ಮಂಡ್ಯಕ್ಕೆ ಬಂದಿದ್ರು. ಮಿಮ್ಸ್ಗೆ ಮರಳಿದ ಬಳಿಕ ಅವರನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು.
ಕೋವಿಡ್ ಟೆಸ್ಟ್‌ನಲ್ಲಿ ನಾಲ್ವರಿಗೆ ಡಿ.24 ರಂದು ಕೊರೊನಾ ದೃಢವಾಗಿತ್ತು. ಇದಾದ ಬಳಿಕ 145 ಹಾಸ್ಟೆಲ್ ವಿದ್ಯಾರ್ಥಿನಿಯರಿಗೂ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆ ವೇಳೆ ಮತ್ತೆ 5 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಮಹಿಳಾ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನಲ್ಲಿ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪುರುಷ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್‌ಗೆ ನಿರ್ಧರಿಸಲಾಗಿದೆ.
Discussion about this post