ಬಾಲಿವುಡ್ನ ‘ಮಿರ್ಜಾಪುರ’ ವೆಬ್ ಸೀರಿಸ್ನಲ್ಲಿ ಮುನ್ನಾ ಭಯ್ಯಾ ಸ್ನೇಹಿತನಾಗಿ ಲಲಿತ್ ಪಾತ್ರದಲ್ಲಿ ನಟಿಸಿದ್ದ ಬ್ರಹ್ಮ ಮಿಶ್ರಾ ಅವರು ಮುಂಬೈನ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಾಹಿತಿಗಳ ಪ್ರಕಾರ ನವೆಂಬರ್ 29 ಬ್ರಹ್ಮ ಮಿಶ್ರಾ ಎದೆ ನೋವೆಂದು ವೈದ್ಯರನ್ನು ಭೇಟಿ ಮಾಡಿದ್ದರು.
ವೈದ್ಯರು ಗ್ಯಾಸ್ಟ್ರಿಕ್ಗೆ ಔಷಧಿ ನೀಡಿದ ನಂತರ ಅವರನ್ನು ಮನೆಗೆ ಕಳುಹಿಸಿದ್ದಾರೆ. ಆದರೆ ನಂತರ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬ್ರಹ್ಮ ಅವರು ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಅವರ ಮೃತ ದೇಹವು ಸ್ನಾನಗೃಹದಲ್ಲಿ ಪತ್ತೆಯಾಗಿದ್ದು, ಮನೆಯಿಂದ ದುರ್ವಾಸನೆ ಬಂದ ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಳಿಕ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ನಂತರ ಫ್ಲಾಟ್ ಬೀಗ ಒಡೆದು ಒಳಗೆ ಪ್ರವೇಶಿಸಿದ ಪೊಲೀಸರಿಗೆ ಬಾತ್ ರೂಂನಿಂದ ವಾಸನೆ ಬರುತ್ತಿರುವುದು ಗೊತ್ತಾಗಿದೆ. ಸ್ನಾನಗೃಹದ ಬಾಗಿಲು ತೆರೆದಾಗ ಬ್ರಹ್ಮ ಅವರ ದೇಹವು ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಹೃದಯಾಘಾತದಿಂದ ನಟ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಬ್ರಹ್ಮ ಮಿಶ್ರಾ ಅವರ ಸಾವಿಗೆ ಬಾಲಿವುಡ್ನ ಖ್ಯಾತ ನಟರು ಸಂತಾಪ ಸೂಚಿಸಿದ್ದಾರೆ. ಬ್ರಹ್ಮ ಮಿಶ್ರಾ ‘ದಿ ಮೌಂಟೇನ್ ಮ್ಯಾನ್’, ‘ದಂಗಲ್’, ‘ಕೇಸರಿ’ ಮತ್ತು ‘ಮಿರ್ಜಾಪುರ’ದಂತಹ ಸಿನಿಮಾಗಳಲ್ಲಿನ ಪಾತ್ರಗಳಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದರು.
Discussion about this post