ಕೋಳಿಯೊಂದು ಹಾವನ್ನು ಓಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಮರಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕೋಳಿ ನಡೆಸಿದ ಸಾಹಸ ದೃಶ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಕೋಳಿಯೊಂದು ಹಾವನ್ನು ಓಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಮರಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕೋಳಿ ನಡೆಸಿದ ಸಾಹಸ ದೃಶ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ತಾಯಿಯಾದವಳು ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಕ್ಕಳ ಉಳಿವಿಗೆ ಹೋರಾಟ ಮಾಡ್ತಾಳೆ. ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಕೂಡ ಇದಕ್ಕೆ ಭಿನ್ನವಾಗಿಲ್ಲ. ಇಲ್ಲೊಂದು ಕೋಳಿ ತನ್ನ ಮೊಟ್ಟೆಗಳನ್ನು ತಿನ್ನಲ್ಲು ಬಂದಿದ್ದ ಹಾವನ್ನು ಕಚ್ಚಿ ಕಚ್ಚಿ ಓಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಳಿಯ ಪಂಜರವೊಂದರಲ್ಲಿ ಹಾವೊಂದು ಕುಳಿತಿತ್ತು. ಅಲ್ಲಿದ್ದ ಕೆಲವು ಮೊಟ್ಟೆಗಳನ್ನು ತಿಂದು ತೇಗುತ್ತಿತ್ತು. ಈ ವೇಳೆಯಲ್ಲಿ ಕೋಳಿಯ ಮಾಲೀಕ ಕೋಲಿನ ಸಹಾಯದಿಂದ ಹಾವನ್ನು ಕೆಳಗೆ ಹಾಕಿದ್ದಾರೆ. ಈ ವೇಳೆಯಲ್ಲಿ ಅಲ್ಲಿಯೇ ಇದ್ದ ಹೆಣ್ಣು ಕೋಳಿ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹಾವನ್ನು ಕುಕ್ಕಿ ಕುಕ್ಕಿ ಸ್ಥಳದಿಂದ ಓಡಿಸಿದೆ.
This brave chicken managed to successfully chase off a black racer snake! 😲🐍🐔#viralhog #snake #chickens #brave #standyourground #Georgia pic.twitter.com/9zKG5IInWM
— ViralHog (@ViralHog) August 25, 2021
ಕೋಳಿ ಆರ್ಭಟಿಸುತ್ತಿದ್ರೆ ಹಾವು ಯಾವುದೇ ರೀತಿಯಲ್ಲಿಯೂ ಪ್ರತಿರೋಧವನ್ನು ತೋರಿಸದೇ ಸ್ಥಳದಿಂದ ಕಾಲ್ಕಿತ್ತಿದೆ. @ViralHog ಅನ್ನೋ ಟ್ವೀಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ 59 ಸೆಕೆಂಡ್‌ಗಳ ವಿಡಿಯೋ ಸದ್ದು ಮಾಡುತ್ತಿದೆ.
Discussion about this post