ಮಹಾರಾಷ್ಟ್ರದಲ್ಲಿ ಕನ್ನಡಪರ ಸಂಘಟನೆ ಸದಸ್ಯ ಸಿಎಂ ಶಿವಕುಮಾರ್ ನಾಯ್ಕ್ ಮೇಲೆ ಹಲ್ಲೆ ಮರಾಠಿಗರು ಹಲ್ಲೆ ಮಾಡಿದ್ದಾರೆ.
ಸಿಎಂ ಶಿವಕುಮಾರ್ ನಾಯ್ಕ್, ಸರ್ವ ಸಂಘಟನೆ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ನಿನ‌್ನೆ ಮಧ್ಯರಾತ್ರಿ ಮರಾಠಿಗರು ಹಲ್ಲೆ ಮಾಡಿದ್ದಾರೆ.
ಒಂದು ವಾರದ ಹಿಂದೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಈ ಸಂಘಟನೆ ಸದಸ್ಯರು ತೆರಳಿದ್ದರು.
ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸದ ಬಳಿ ಸಂಘಟನೆ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದರು. ಉದ್ಧವ್ ಠಾಕ್ರೆ ಮುಖಕ್ಕೆ ಮಸಿ ಬಳಿಯುವ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ.
ಒಂದು ವಾರದಿಂದ ಇವರ ಚಲನ ವಲನ ಗಮನಿಸಿದ್ದ ಮರಾಠಿಗರು, ನಿನ್ನೆ ಶಿವಕುಮಾರ್ ನಾಯ್ಕ್ ತಂಗಿದ್ದ ಲಾಡ್ಜ್ಗೆ ನುಗ್ಗಿದ ಹತ್ತಾರು ಮರಾಠಿಗರು ಥಳಿಸಿದ್ದಾರೆ. ಅಲ್ಲದೇ ಮರಾಠಿಯಲ್ಲಿ ಕ್ಷಮೆ ಕೇಳುವಂತೆ ಕೆನ್ನೆಗೆ ಬಾರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Discussion about this post