ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಸೂಚನೆ ಕಂಡು ಬಂದಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಯಕ್ಟ್ ಅಡಿಯಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
ಗೃಹ ಸಚಿವಾಲಯದ ಸೂಚನೆ ಏನು?
- ಹೆಚ್ಚುತ್ತಿರುವ ಕೊರೊನಾ ಸೋಂಕಿನ ಭೀತಿ
- ರಾಜ್ಯಗಳಿಗೆ ಕೇಂದ್ರದಿಂದ ಕಠಿಣ ಸೂಚನೆ ಕೊಟ್ಟ ಕೇಂದ್ರ
- ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಸೂಚನೆ
- ಒಮಿಕ್ರಾನ್ ವೇರಿಯಂಟ್ ಆಫ್ ಕನ್ಸರ್ನ್ ಆಗಿದೆ
ಸದ್ಯ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲೂ ಏರಿಕೆ ಆಗ್ತಿದೆ. ಜೊತೆಗೆ ಓಮಿಕ್ರಾಣ್ ಕೊರೊನಾ ತಳಿಯ ಸೋಂಕೂ ಸಹ 600ರ ಗಡಿ ದಾಟುವಂತಿದೆ. ಇಂಥ ಸನ್ನಿವೇಶದಲ್ಲಿ ಎಲ್ಲ ರಾಜ್ಯಗಳೂ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಸೋಂಕಿನ ಪ್ರಮಾಣದಲ್ಲಿ ಏನಾದ್ರೂ ಹೆಚ್ಚಳವಾದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದೂ ಗೃಹ ಸಚಿವಾಲಯ ತಾಕೀತು ಮಾಡಿದೆ. ಇದಕ್ಕಾಗಿ ಮೈ ಕಂಟೈನ್ಮೆಂಟ್ ಝೋನ್ನತ್ತ ಗಮನ ಹರಿಸಿ ಎಂದೂ ಕೇಂದ್ರ ತಿಳಿಸಿದೆ. ಅಷ್ಟೇ ಅಲ್ಲ ಯಾರಾದ್ರೂ ಕೊರೊನಾ ನಿಯಮಗಳನ್ನು ಪಾಲಿಸದೇ ಇದ್ದರೆ, ಅಂಥವರ ಮೇಲೂ ಕ್ರಮ ಕೈಗೊಳ್ಳಿ ಎಂದು ಸೂಚಿಸಲಾಗಿದೆ.
ಕಂಟೈನ್ಮೆಂಟ್ಗೆ ಏನು ಕಂಡೀಷನ್ ಗೊತ್ತಾ?
- ಶೇ.10 ಅಥವಾ ಹೆಚ್ಚು ಪಾಸಿಟಿವಿಟಿದರ ಇದ್ರೆ
- ಶೇ.40 ಅಥವಾ ಹೆಚ್ಚು ಬೆಡ್ಗಳು ಫುಲ್ ಆದ್ರೆ
ಸದ್ಯ ದೇಶದಲ್ಲಿ ಪಾಸಿಟಿವಿಟಿ ದರ ಅತ್ಯಂತ ಕಡಿಮೆ ಇದೆ. ಆದ್ರೆ ಒಂದು ವೇಳೆ ಯಾವುದಾದ್ರೂ ಪ್ರದೇಶದಲ್ಲಿ ಅಥವಾ ಕ್ಲಸ್ಟರ್ಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.10 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಕಂಟೈನ್ಮೆಂಟ್ ಝೋನ್ ಮಾಡಿ. ಅಷ್ಟೇ ಅಲ್ಲ ಏನಾದ್ರೂ ಆಸ್ಪತ್ರೆ ಬೆಡ್ಗಳು ಶೇ.40ರಷ್ಟು ಭರ್ತಿಯಾದ್ರೂ ಕಂಟೈನ್ಮೆಂಟ್ ಮಾಡಿ ಎಂದು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಆದ್ರೆ ಕಂಪ್ಲೀಟ್ ಲಾಕ್ಡೌನ್ ಬಗ್ಗೆ ಮಾತ್ರ ಯಾವುದೇ ಸೂಚೆ ನೀಡಲಾಗಿಲ್ಲ.
Discussion about this post