ಇಂಗ್ಲೆಂಡ್ನ ಕೆಂಟ್ ಆಶ್ಫೋರ್ಡ್ನ 20ರ ಹರೆಯದ ಮಾಡೆಲ್ ಲಾರೆನ್ ನೈಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೊಮೇರಿಯನ್ ಶ್ವಾನಗಳ ದಿರಿಸುಗಳ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಎರಡು ಪೊಮೇರಿಯನ್ ನಾಯಿಗಳ ಒಂದೇ ರೀತಿಯ ದಿರಿಸಿಗಾಗಿ ಈ ಮಾಡೆಲ್ ಖರ್ಚುಮಾಡಿರುವ ಮೊತ್ತ ಯಾರನ್ನೂ ಕೂಡ ಬೆಚ್ಚಿಬೀಳಸಬಹುದು. ಆಕೆ (£7,000) 7.25 ಲಕ್ಷ ರೂಪಾಯಿ ಅನ್ನು ದಿರಿಸುಗಳಿಗಾಗಿ ಖರ್ಚುಮಾಡಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಸಾಕು ಪ್ರಾಣಿಗಳ ಬೊಟಿಕ್ ಹಾಗೂ ದಿರಿಸುಗಳ ಶಾಪ್ Ro & Friends ಎಂಬ ಮಳಿಗೆಯ ಮಾಲಿಕೆಯಾಗಿರುವ ಲಾರೆನ್ ನೈಟ್‌ಗೆ ತಮ್ಮ ಎರಡು ಹಾಗೂ ಐದು ವರ್ಷಗಳ ಪೊಮೇರಿಯನ್ ಶ್ವಾನಗಳಾದ ಮಿಮಿ ಹಾಗೂ ಮಿಲೊಗೆ ಸುಂದರವಾದ ಉಡುಗೆಗಳನ್ನು ತೊಡಿಸಿ ಅವುಗಳನ್ನು ಅಲಂಕಾರ ಮಾಡುವುದೆಂದರೆ ವಿಪರೀತ ಇಷ್ಟವಂತೆ.
ಈ ಶ್ವಾನಗಳು ತಮ್ಮದೇ ಆದ ದಿರಿಸುಗಳ ಕಪ್ಬೋರ್ಡ್ (ವಾರ್ಡ್‌ರೋಬ್) ಅನ್ನು ಹೊಂದಿದ್ದು, ಇಲ್ಲಿ ಇವುಗಳ ಒಂದೇ ರೀತಿಯ ಅತ್ಯಾಕರ್ಷಕ ಬಟ್ಟೆಬರೆಗಳಿವೆ ಎಂದು ಲಾರೆನ್ ಹೇಳುತ್ತಾರೆ. ಲಾರೆನ್ ಸಾಕುಪ್ರಾಣಿಗಳ ಬಟ್ಟೆಯಂಗಡಿ ತೆರೆದಾಗ ಮಿಮಿ ಹಾಗೂ ಮಿಲೋವನ್ನು ಬಟ್ಟೆ ಹಾಗೂ ಪರಿಕರಗಳ ಪ್ರದರ್ಶನಗಳಿಗಾಗಿ ಮಾಡೆಲ್‌ಗಳಂತೆ ಬಳಸಲು ಪ್ರಾರಂಭಿಸಿದ್ದರಂತೆ.
Discussion about this post