ಇಂದು ಸುಮಲತಾ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ 30ನೇ ಮದುವೆ ವಾರ್ಷಿಕೋತ್ಸವ. ಇದರ ಅಂಗವಾಗಿ ಸುಮಲತಾ ತನ್ನ ಪತಿ ಅಂಬಿ ಅವರನ್ನು ನೆನದು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
1991 ಡಿಸೆಂಬರ್ 9 ರಂದು ಅಂಬರೀಶ್, ಸುಮಲತಾ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.
ಇಂದಿಗೆ ಸುಮಲತಾ ಅಂಬಿಯನ್ನು ಮದವೆಯಾಗಿ 30 ವರ್ಷ ಆಗಿದೆ. ಹೀಗಾಗಿ ಅಂಬಿ ಜೊತೆಗೆ ಇರುವ ಪೋಟೋ ಶೇರ್ ಮಾಡಿರುವ ಸುಮಲತಾ ಭಾವುಕ ಪೋಸ್ಟ್ ಹಾಕಿದ್ದಾರೆ.
ಮೂವತ್ತು ವರ್ಷ..
30 years…❤️ pic.twitter.com/So2nRbdWXq— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) December 8, 2021
‘ಇಂದಿಗೆ ನಾನು ನೀವು ಮದುವೆಯಾಗಿ 30 ವರ್ಷ. ನಿಮ್ಮನು ನಾನು ಕಳೆದುಕೊಂಡು 3 ವರ್ಷ. ನಾನು ಬದುಕಿರುವ ಪ್ರತಿ ಕ್ಷಣದವರೆಗೂ ನಮ್ಮ ಪ್ರೀತಿ ಬದುಕಿರುತ್ತದೆ. ಇಂದು ನಾನು ಬರುಕಿರುವುದೇ ನಮ್ಮ ಪ್ರೀತಿಯಿಂದ, ಹ್ಯಾಪಿ ಆಯನಿವರ್ಸರಿ’ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Discussion about this post