ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯ ಈ ಬಾರಿ ಮುಂಗಾರು ಕೈ ಕೊಟ್ಟ ಹಿನ್ನೆಲೆ ಜಲಾಶಯ ಭರ್ತಿಯಾಗುವ ಅನುಮಾನ ಮೂಡಿಸಿತ್ತು. ವಾಡಿಕೆಯಂತೆ ಜಲಾಶಯ ಭರ್ತಿಯಾಗದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ದಂಪತಿ ಖ್ಯಾತ ಜ್ಯೋತಿಷಿ ಡಾ. ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಇದೆ ತಿಂಗಳ 7 ರಂದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಾಗಿತ್ತು.
ವಿಶೇಷ ಪೂಜೆ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ್ದರಿಂದ ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿ ಬಾಕಿ ಉಳಿದಿದೆ. ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು ಇದ್ದು ಇಂದಿನ ನೀರಿನ ಮಟ್ಟ 123.40 ಅಡಿ. ಇಂದಿನ ಒಳಹರಿವಿನ ಪ್ರಮಾಣ 19341 ಸಾವಿರ ಕ್ಯೂಸೆಕ್.ಇಂದಿನ ಹೊರ ಹರಿವಿನ ಪ್ರಮಾಣ 3535 ಸಾವಿರ ಕ್ಯೂಸೆಕ್ ಇದ್ದು ಇನ್ನು ಒಂದು ಅಡಿ ನೀಎಉ ಬಂದರೆ ಜಲಾಶಯ ಸಂಪೂರ್ಣ ಭತಿಯಾಗುತ್ತದೆ.
ಇದನ್ನೂ ಓದಿ :
ಕೋವಿಡ್-19: ಎವೈ 2.2 ರೂಪಾಂತರಿ ಡೆಲ್ಟಾ ತಳಿಗಿಂತ ಅಪಾಯಕಾರಿಯೇ? ನೀವು ತಿಳಿಯಲೇಬೇಕಾದ ಅಂಶಗಳು..!
Discussion about this post