ಬೆಂಗಳೂರು: ಸಂತೋಷ್ ಚಿತ್ರಮಂದಿರದಲ್ಲಿ ‘ನಿನ್ನ ಸನಿಹಕೆ’ ಚಿತ್ರದ ಇಂದಿನ ಪ್ರದರ್ಶನ ರದ್ದಾಗಿದೆ. ವಿದ್ಯುತ್ ಸಮಸ್ಯೆಯಿಂದ ಇಂದಿನ ಶೋಗಳನ್ನ ಚಿತ್ರಮಂದಿರದವರು ಕ್ಯಾನ್ಸಲ್ ಮಾಡಿದ್ದಾರೆ.
ಆದರೆ ಶೋ ಕ್ಯಾನ್ಸಲ್ ಆಗಿರೋ ಬಗ್ಗೆ ಚಿತ್ರತಂಡಕ್ಕೆ ಯಾವುದೇ ಮಾಹಿತಿ ಗೊತ್ತಿಲ್ಲ. ಅಲ್ಲದೇ ಮೊದಲ ದಿನದ ಮೊದಲ ಶೋ ನೋಡಲು ಬಂದಿದ್ದ ಚಿತ್ರತಂಡಕ್ಕೆ ಹಾಗೂ ಪ್ರೇಕ್ಷಕರಿಗೂ ನಿರಾಸೆಯಾಗಿದೆ. ಅಂದ್ಹಾಗೆ ಕಳೆದ ಮೂರು ದಿನಗಳಿಂದ ಸಂತೋಷ್ ಚಿತ್ರಮಂದಿರದಲ್ಲಿ ಕರೆಂಟ್ ಇರಲಿಲ್ಲ ಎನ್ನಲಾಗಿದೆ.
ಟ್ರಾನ್ಸ್ ಫಾರ್ಮರ್ ಸಮಸ್ಯೆ ಜೊತೆಗೆ ಜನರೇಟರ್ ಕೂಡ ವರ್ಕ್ ಆಗುತ್ತಿರಲಿಲ್ಲ. ಹೀಗಿದ್ದೂ ಚಿತ್ರಮಂದಿರದವರು ಸಿನಿಮಾ ರಿಲೀಸ್ಗೆ ಮುಂದಾಗಿದ್ದರು. ಇಂದು ಸಿನಿಮಾ ರಿಲೀಸ್ ಆಗೋದು ಗೊತ್ತಿದ್ದರೂ ವಿದ್ಯುತ್ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲಿಲ್ಲ ಎನ್ನಲಾಗಿದೆ.
Discussion about this post