-
ಮತ್ತೆ ಸುದ್ದಿಯಾದ ಮೈಸೂರು ಸೋಷಿಯಲ್ಸ್ ಕ್ಲಬ್..!
-
ಕೈ ಮುಖಂಡ ರಾಕೇಶ್ ಪಾಪಣ್ಣ ಆಯೋಜಿಸಿದ್ದ ಪಾರ್ಟಿಯಲ್ಲಿ ಗಲಾಟೆ
-
ಸೋಷಿಯಲ್ಸ್ ಕ್ಲಬ್ನಲ್ಲಿ ರಾತ್ರಿ 8.30ರ ಸುಮಾರಿಗೆ ನಡೆದಿರುವ ಗಲಾಟೆ
-
ರಾಜಕೀಯ ಮುಖಂಡರು, ಸಿನಿಮಾ ನಟರು, ಗೆಳೆಯರಿಗೆ ನೀಡಿದ್ದ ಪಾರ್ಟಿ
-
ಮಾಜಿ ಉಪಮೇಯರ್ ಅರ್ಜುನ್ ವಿರುದ್ಧ ಕೊಲೆ ಯತ್ನ ದೂರು ದಾಖಲು
-
ಸುಜಿತ್ ಕುಮಾರ್ @ ಲಾಡ್ಜ್ ಕುಮಾರ್, ರವಿಕುಮಾರ್ @ ರಾಜಕೀಯ ರವಿಗೆ ಗಾಯ
-
ಮಾಜಿ ಉಪಮೇಯರ್ ಹಾಗೂ ಮೂವರ ಮೇಲೆ ಕೊಲೆ ಯತ್ನ ಕೇಸ್
-
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
-
ಸೆಕ್ಷನ್ 307, 323, 504, 506, 34 ಅಡಿ ಎಫ್‌ಐಆರ್ ದಾಖಲು
-
ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಸುಜಿತ್ ಕುಮಾರ್‌ಗೆ ಚಿಕಿತ್ಸೆ
ಗಲಾಟೆಯಲ್ಲಿ ಮೈಸೂರು ಸೋಷಿಯಲ್ಸ್ ಕ್ಲಬ್ ಮತ್ತೆ ಸುದ್ದಿಯಾಗಿದೆ. ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಆಯೋಜಿಸಿದ್ದ ಪಾರ್ಟಿಯಲ್ಲಿ ಕಳೆದ ರಾತ್ರಿ 8.30ರ ಸುಮಾರಿಗೆ ಗಲಾಟೆ ನಡೆದಿದೆ. ರಾಜಕೀಯ ಮುಖಂಡರು, ಸಿನಿಮಾ ನಟರು, ಗೆಳೆಯರಿಗೆ ನೀಡಿದ್ದ ಪಾರ್ಟಿಯಲ್ಲಿ ಸುಜಿತ್ ಕುಮಾರ್ @ ಲಾಡ್ಜ್ ಕುಮಾರ್, ರವಿಕುಮಾರ್ @ ರಾಜಕೀಯ ರವಿ ಮೇಲೆ ಮಾಜಿ ಉಪಮೇಯರ್ ಅರ್ಜುನ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳು ಸುಜಿತ್ ಕುಮಾರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಈ ಸಂಬಂಧ ಮಾಜಿ ಉಪಮೇಯರ್ ಹಾಗೂ ಮೂವರ ಮೇಲೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Discussion about this post