ಚಿತ್ರದುರ್ಗ ಸಿನಿಮಾ ವಿತರಕ ಖಾಝಾಫೀರ್ ಎಂಬುವವರು ಆಡಿಯೋದಲ್ಲಿ ನಿರ್ಮಾಪಕ ಸೂರಪ್ಪ ಬಾಬು ಚಿತ್ರ ವಿತರಣೆಗೆ 60 ಲಕ್ಷ ಹಣ ಪಡೆದಿದ್ದರು. ಕೋಟಿಗೊಬ್ಬ-3 ಚಿತ್ರದ ವಿತರಣೆಗೆ ಖಾಝಾಪೀರ್ 1 ಕೋಟಿ 90 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ ಚಿತ್ರವೂ ನೀಡದೆ ಹಣವೂ ನೀಡದೆ ಧಮ್ಕಿ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ.
ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮೂರು ಜಿಲ್ಲೆಗೆ ಖಾಝಾಪೀರ್ ಕುಮಾರ್ ಫಿಲಂಸ್ ಮೂಲಕ ಡಿಸ್ಟ್ರೀಬ್ಯೂಷನ್ ಪಡೆದಿದ್ದರಂತೆ. ಮಾರ್ಚ್ 31ಕ್ಕೆ ಕಾಳಿಂಗ ಆಯಡ್ಸ್ ಮೂಲಕ ರಾಂಬಾಬು ಫಿಲಂಸ್ ಗೆ ಹಣ ಸಂದಾಯ ಮಾಡಿದ್ದರಂತೆ.ಸೆಪ್ಟೆಂಬರ್ 23 ಕ್ಕೆ -1 ಲಕ್ಷ, 27 ಕ್ಕೆ-04 ಲಕ್ಷ, ಅಕ್ಟೋಬರ್27ಕ್ಕೆ -05 ಹಣವನ್ನು ಖಾಝಾಪೀರ್ ನೀಡಿದ್ದರಂತೆ. ರಾಂ ಬಾಬು ಪ್ರೊಡಕ್ಷನ್ ಹೆಸರಿಗೆ ಒಟ್ಟು 60 ಲಕ್ಷ ಹಣvನ್ನ ಖಾಝಾಪೀರ್ ನೀಡಿದ್ದರಂತೆ. ಉಳಿದ ಹಣ ನೀಡದ ಕಾರಣ ಸಿನಿಮಾ ರಿಲೀಸ್ ಲೈಸನ್ಸ್ ಕೊಟ್ಟಿರಲಿಲ್ಲವಂತೆ.
ಸಿನಿಮಾ ಬಿಡುಗಡೆ ಆಗದಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಮರುದಿನ ಜಾಕ್ ಮಂಜುಗೆ ಸಿನಿಮಾ ವಿತರಣೆಗೆ MB ಬಾಬು ಅವಕಾಶ ನೀಡಿದ್ದರು. ಬಳಿಕ ಹಣ ವಾಪಾಸ್ ಕೇಳಿದ್ದ ಖಾಝಾಪೀರ್ಗೆ ಸೂರಪ್ಪ ಬಾಬು ಕೊಲೆ ಬೆದರಿಕೆ ಹಾಕಿದ್ದಾರೆಂದು ಹೇಳಲಾಗಿದೆ.
ಲಾಯರ್ ಬಳಿ ಡ್ರಾಫ್ಟ್ ಹಾಕ್ಸಿದ್ದೇನೆ ಸಹಿ ಮಾಡಿ ಹೋಗಿ. ಇಲ್ಲವಾದಲ್ಲಿ ನಿಮಗೆ ಚಿತ್ರದುರ್ಗ ಬಿಡಿಸ್ತೀನಿ ಎಂದು ಧಮ್ಕಿ ಹಾಕಿದ್ದಾರಂತೆ. ನೀವು ಕೊಟ್ಟ ಹಣ ಯಾವುದೇ ಕಾರಣಕ್ಕೂ ವಾಪಸ್ ಬರಲ್ಲ ನಾನೇ ಬಂದು ಹೊಡಿತಿನಿ ಎಂದು ಆವಾಜ್ ಹಾಕಿದ್ದಾರೆ. ಸುದೀಪ್ ಅಭಿಮಾನಿಗಳನ್ನ ಎತ್ತಿಕಟ್ಟಿ ಗಲಾಟೆ ಮಾಡಿಸುತ್ತಾರಂತೆ ಎಂದು ಆರೋಪಿಸಿದ್ದಾರೆ.
ವಿತರಕ ಖಾಝಾಪೀರ್, ಕುಮಾರ್ ಫಿಲಂಸ್ನ ಕುಮಾರ್ಗೆ ನಿರ್ಮಾಪಕ ಸೂರಪ್ಪಬಾಬು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದ್ದು. ಸೂರಪ್ಪ ಬಾಬು ನಿಂದಿಸಿದ ಆಡಿಯೋವನ್ನು ಖಾಜಾಪೀರ್ ಮತ್ತು ಕುಮಾರ್ ಬಿಡುಗಡೆ ಮಾಡಿದ್ದಾರೆ. ಕೊಲೆ ಬೆದರಕೆ ಹಾಕಿದ ಹಿನ್ನಲೆ ಸೂರಪ್ಪ ಬಾಬು ವಿರುದ್ದ ಚಿತ್ರದುರ್ಗ ನಗರ ಪೋಲೀಸ್ ಠಾಣೆಯಲ್ಲಿ ಖಾಝಾಪೀರ್ ಮತ್ತು ಕುಮಾರ್ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
Discussion about this post