ಐಪಿಎಲ್ ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆಯೇ ಟಿ20 ವಿಶ್ವಕಪ್‌ನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಪುರುಚರ ಚುಟುಕು ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಡಿಸಿಶನ್ ರಿವ್ಯೂ ಸಿಸ್ಟಮ್ ಬಳಸಿಕೊಳ್ಳಲು ಐಸಿಸಿ ನಿರ್ಧರಿಸಿದೆ. ಈ ಬಗ್ಗೆ ಐಸಿಸಿ ಭಾನುವಾರ ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ತಿಂಗಳ ಮಧ್ಯದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಡಿಸಿಶನ್ ರಿವ್ಯೂ ಸಿಸ್ಟಮ್‌ಅನ್ನು ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಕಮಿಟಿ ನಿರ್ಧರಿಸಿರುವುದಾಗಿ ಐಸಿಸಿಯ ನಿಯಮಾವಳಿಯಲ್ಲಿ ತಿಳಿಸಿದೆ.
ಟಿ20 ವಿಶ್ವಕಪ್‌ನ ನಿಯಮಾವಳಿಯನ್ನು ಐಸಿಸಿ ಬಿಡುಗಡೆಗೊಳಿಸಿದ್ದು ಇದರಲ್ಲಿ ಒಂದು ತಂಡಕ್ಕೆ ಒಂದು ಇನ್ನಿಂಗ್ಸ್‌ನಲ್ಲಿ ಎರಡು ರಿವ್ಯೂ ಪಡೆಯುವ ಅವಕಾಶವಿದೆ. 2016ರ ವರೆಗೂ ಟಿ20 ಕ್ರಿಕೆಟ್‌ಗೆ ಡಿಆರ್‌ಎಸ್ ಪರಿಚಯಿಸಿರಲಿಲ್ಲ. 2018ರಲ್ಲಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಡಿಆರ್‌ಎಸ್ ಬಳಸಿಕೊಳ್ಳಲಾಗಿತ್ತು. ನಂತರ 2020ರ ಮಹಿಳಾ ವಿಶ್ವಕಪ್‌ನಲ್ಲಿಯೂ ಡಿಆರ್‌ಎಸ್ ಬಳಸಿಕೊಂಡಿತ್ತು ಐಸಿಸಿ.
ಆಗ ಪ್ರತಿ ತಂಡಗಳಿಗೂ ಒಂದು ಡಿಆರ್‌ಎಸ್ ನೀಡಲಾಗಿತ್ತು. ಆದರೆ ಕೋರೊನಾವೈರಸ್‌ನ ಬಳಿಕ ಅನುಭವಿ ಅಂಪಾಯರ್‌ಗಳ ಪ್ರಮಾಣ ಕಡಿಮೆಯಾದ ಕಾರಣದಿಂದಾಗಿ ರಿವ್ಯೂ ಸಂಖ್ಯೆಯನ್ನು ಹೆಚ್ಚಳಗೊಳಿಸಲಾಗಿದೆ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿಯೂ ಎರಡು ಡಿಆರ್‌ಎಸ್ ನೀಡಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಈ ಹಿಂದೆ ಇದ್ದ ಡಿಆರ್‌ಎಸ್ ಪ್ರಮಾಣವನ್ನು ಎರಡರಿಂದ ಮೂರಕ್ಕೆ ಏರಿಸಲಾಗಿದ್ದರೆ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಒಂದರಿಂದ ಎರಡಕ್ಕೆ ಏರಿಕೆ ಮಾಡಲಾಗಿದೆ
ಮುಂದಿನ ಭಾನುವಾರದಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಮೊದಲಿಗೆ ಗ್ರೂಪ್ ಹಂತದ ಪಂದ್ಯಗಳು ನಡೆಯಲಿದ್ದು ಈ ಹಂತದಲ್ಲಿ ಮ ಪ್ರಧಾನ ಸುತ್ತಿಗೆ ಆಯ್ಕೆಯಾಗಲು 8 ತಂಡಗಳು ಕಾದಾಟವನ್ನು ನಡೆಸಲಿದೆ. ಇದರಲ್ಲಿ ಆಯ್ಕೆಯಾದ ನಾಲ್ಕು ತಂಡಗಳು ಸೂಪರ್ 12 ಸುತ್ತಿನಲ್ಲಿ ಉಳಿದ ತಂಡಗಳು ಜೊತೆಗೆ ಸೆಣೆಸಾಟವನ್ನು ನಡೆಸಲಿದೆ
ಇದನ್ನೂ ಓದಿ :
Discussion about this post