ಅಧಿಕಾರಿಗಳು ಕೇಳಿದ್ದೇನು..?
ಎನ್ಸಿಬಿ ತನಿಖೆಯ ಪಂಚನಾಮೆ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ ಎನ್ನಲಾಗಿದೆ. ಐಷಾರಾಮಿ ಹಡಗಿನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಡ್ರಗ್ ಸೇವನೆ ನಡೆಯುತ್ತಿದೆ ಅನ್ನೋ ಖಚಿತ ಮಾಹಿತಿ ಎನ್ಸಿಬಿಗೆ ಸಿಕ್ಕಿತ್ತು. ಅದರಂತೆ ದಾಳಿ ಮಾಡಿದಾಗ ಆರ್ಯನ್ ಹಾಗೂ ಸ್ನೇಹಿತ ಅರ್ಬಾಜ್ನನ್ನ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ದಾಖಲಿಸಿಕೊಂಡಿರುವ ಹೇಳಿಕೆಯಲ್ಲಿ ಡ್ರಗ್ ಸೇವನೆ ಬಗ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಎನ್ಸಿಬಿ ಅಧಿಕಾರಿ ಆಶಿಶ್ ರಂಜನ್ ಪ್ರಸಾದ್ ಪಂಚನಾಮೆಯಲ್ಲಿ ದಾಖಲಿಸಿರುವ ಮಾಹಿತಿ ಪ್ರಕಾರ.. ಎನ್ಸಿಬಿ ಅಧಿಕಾರಿಗಳು ಈ ಮೊದಲು ಗೆಜೆಟೆಡ್ ಅಧಿಕಾರಿಗಳ ಸಹಾಯದಿಂದ ಆರ್ಯನ್ ಖಾನ್ ಹಾಗೂ ಅರ್ಬಾಜ್ ಮರ್ಚೆಂಟ್ ಮೇಲೆ ತನಿಖೆ ನಡೆಸಲು ಸೂಚಿಸಿತ್ತು. ಆದರೆ ಇವರಿಬ್ಬರು ಡ್ರಗ್ ಸೇವನೆಯನ್ನ ಒಪ್ಪಿಕೊಳ್ಳಲು ನಿರಕರಿಸಿದ್ರಂತೆ. ನಂತರ ಎನ್ಸಿಬಿ ಹಿರಿಯ ಅಧಿಕಾರಿಗಳು ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಬಳಿ ಮಾದಕ ವಸ್ತು ಇದೆಯೇ ಎಂದು ಪ್ರಶ್ನೆ ಮಾಡಿದರು. ಆಗ ಅರ್ಬಾಜ್ ಮರ್ಚೆಂಟ್ ‘ಹೌದು’ ಎಂದು ಉತ್ತರಿಸಿದ್ದಾರೆ. ಅಲ್ಲದೇ ಶೂ ಒಳಗೆ ಅಡಗಿಟ್ಟಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪಂಚನಾಮೆ ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸತ್ಯ ಬಾಯ್ಬಿಟ್ಟಿದ್ದಾರಂತೆ..!
ಅಲ್ಲದೇ ಇದೇ ವೇಳೆ ಅರ್ಬಾಜ್ ಸ್ವಯಂಪ್ರೇರಣೆಯಿಂದ ಶೋನಲ್ಲಿದ್ದ black, sicky substance ವಸ್ತುವನ್ನ ತೆಗೆದು ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಅದನ್ನ ಪರೀಕ್ಷಿಸಿದಾಗ Charas ಅನ್ನೋದು ಸಾಬೀತಾಗಿದೆ. ಇದು ಒಟ್ಟು 6 ಗ್ರಾಮ್ ತೂಕ ಇತ್ತು. ಕುಡಲೇ ಅದನ್ನ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪಂಚನಾಮೆಯಲ್ಲಿ ತಿಳಿಸಲಾಗಿದ್ಯಂತೆ. ಅಲ್ಲದೇ ಆರ್ಯನ್ ಖಾನ್ರನ್ನ ಪ್ರಶ್ನೆ ಮಾಡಿದಾಗ ಡ್ರಗ್ ಸೇವನೆಯನ್ನ ಒಪ್ಪಿಕೊಂಡರು. ಮಾತ್ರವಲ್ಲ ಶೂನಲ್ಲಿ ಇಟ್ಟುಕೊಂಡಿದ್ದ ಮಾದಕ ವಸ್ತುವನ್ನ ಸೇವನೆ ಮಾಡುವ ಬಗ್ಗೆ ತಯಾರಿ ನಡೆಸುತ್ತಿದ್ದೇವು ಎಂದು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
Discussion about this post